Sunday, April 28, 2024
Homeಕರಾವಳಿಉಡುಪಿಉಡುಪಿಯ ಆರು ವಿದ್ಯಾರ್ಥಿನಿಯರು ಟೆರರಿಸ್ಟ್ ಸಂಘಟನೆ ಸದಸ್ಯರು: ಯಶ್ ಪಾಲ್ ಸುವರ್ಣ

ಉಡುಪಿಯ ಆರು ವಿದ್ಯಾರ್ಥಿನಿಯರು ಟೆರರಿಸ್ಟ್ ಸಂಘಟನೆ ಸದಸ್ಯರು: ಯಶ್ ಪಾಲ್ ಸುವರ್ಣ

spot_img
- Advertisement -
- Advertisement -

ಉಡುಪಿ: ಉಡುಪಿಯ ಆರು ವಿದ್ಯಾರ್ಥಿನಿಯಯರು  ಟೆರರಿಸ್ಟ್ ಸಂಘಟನೆ ಸದಸ್ಯರು ಎಂಬುದು ಇವತ್ತು ಸಾಬೀತಾಗಿದೆ ಎಂದು ಉಡುಪಿಯ ಸರ್ಕಾರಿ ಮಹಿಳಾ ಕಾಲೇಜು ಉಪಾಧ್ಯಕ್ಷ ಯಶ್ ಪಾಲ್ ಸುವರ್ಣ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ,ಅಂದು ಈ ವಿದ್ಯಾರ್ಥಿನಿಯರು ಹೈಕೋರ್ಟ್ ತೀರ್ಪಿಗೆ ವ್ಯತಿರಿಕ್ತವಾಗಿ ಹೇಳಿಕೆ ಕೊಟ್ಟರು. ಇವತ್ತು ಅವರಿಗೆ ಅಲ್ ಖೈದಾ ಸಂಘಟನೆ ಬೆಂಬಲ ನೀಡುತ್ತಿದೆ. ಕೆಲವು ಸಂಘಟನೆಯವರು ಷರಿಯತ್ ಕಾನೂನು ಬಗ್ಗೆ ಮಾತನಾಡುತ್ತಾರೆ. ಇವರಿಗೂ ಷರಿಯತ್ ಕಾನೂನಿನಂತೆ ಶಿಕ್ಷೆಯಾಗಲಿ. ಈ ಮೂಲಕ ಇನ್ನಷ್ಟು ಮುಗ್ಧ ಮಕ್ಕಳ ಮೇಲೆ ಪ್ರಭಾವ ಆಗುವ ಸಾಧ್ಯತೆ ತಪ್ಪಿಸಬೇಕು. ದೇಶಕ್ಕೆ, ಉಡುಪಿಗೆ ಗಂಡಾಂತರ ಆಗುವ ಸಾಧ್ಯತೆ ಇದೆ. ಹಿಜಾಬ್ ಪ್ರಕರಣದ ಎನ್ ಐ ಎ ತನಿಖೆ ಆಗಬೇಕು ಎಂದು ಈ ಮೊದಲೂ ಹೇಳಿದ್ದೆ ಈಗಲೂ ಆಗ್ರಹಿಸುತ್ತೇನೆ ಎಂದು ಹೇಳಿದರು.

- Advertisement -
spot_img

Latest News

error: Content is protected !!