Monday, June 29, 2026
Homeಕರಾವಳಿಹೆಜ್ಜೇನು ದಾಳಿಯಿಂದ ಆರು ಮಂದಿ ಗಾಯ

ಹೆಜ್ಜೇನು ದಾಳಿಯಿಂದ ಆರು ಮಂದಿ ಗಾಯ

- Advertisement -
- Advertisement -

ಬೆಳ್ತಂಗಡಿ: ಕೊಡಿಯೇಲು ಬಳಿಯಲ್ಲಿ ಹೆಜ್ಜೇನು ದಾಳಿಯಂದ ಆರು ಮಂದಿಗೆ ಗಾಯವಾಗಿದ್ದು, ಗಂಭೀರ ಗಾಯಗೊಂಡವರನ್ನು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮಚ್ಚಿನ ಕೊಡಿಯೇಲು ಕ್ವಾರಿಗೆ ತಿರುಗುವ ರಸ್ತೆ ಬಳಿಯ ಮರದಲ್ಲಿಯಿದ್ದ ಹೆಜ್ಜೇನು ಗುರುವಾರದಂದು ಬೆಳಿಗ್ಗೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದವರ ಮೇಲೆ ದಾಳಿ ನಡೆಸಿದೆ.

ಇದರಿಂದಾಗಿ ಕ್ವಾರಿಗೆ ಕೆಲಸಕ್ಕೆ ಹೋಗುತ್ತಿದ್ದ ನಾಲ್ವರು ಕಾರ್ಮಿಕರು, ಬಳ್ಳಮಂಜ ಮೀನು ಮಾರುಕಟ್ಟೆಗೆ ಕೆಲಸಕ್ಕೆ ಬರುತ್ತಿದ್ದ ಯುವಕ ಸೇರಿ ಆರು ಮಂದಿಗೆ ಹೆಚ್ಚೇನು ಕಚ್ಚಿದೆ. ಬಳ್ಳಮಂಜ ಮೀನು ಮಾರುಕಟ್ಟೆಗೆ ಕೆಲಸಕ್ಕೆ ಬರುತ್ತಿದ್ದ ಯುವಕನಿಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ.

- Advertisement -

Latest News

error: Content is protected !!