Tuesday, June 23, 2026
Homeಅಪರಾಧಆಸ್ತಿಯ ಆಸೆಗಾಗಿ ಸ್ವಂತ ತಮ್ಮನನ್ನೇ ಕೊಂದ ಅಕ್ಕಂದಿರು..!

ಆಸ್ತಿಯ ಆಸೆಗಾಗಿ ಸ್ವಂತ ತಮ್ಮನನ್ನೇ ಕೊಂದ ಅಕ್ಕಂದಿರು..!

- Advertisement -
- Advertisement -

ಚಿಕ್ಕಮಗಳೂರು: ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ಆಸ್ತಿಯ ಆಸೆಗಾಗಿ ಅಕ್ಕಂದಿರು ಬಾವನ ಜತೆ ಸೇರಿ ಸಹೋದರನನ್ನೇ ಕೊಂದ ಘಟನೆ ಆ.22 ಗುರುವಾರದಂದು ನಡೆದಿದೆ.

ಕೊಲೆಯಾದ ವ್ಯಕ್ತಿ 43 ವರ್ಷದ ರಾಘವೇಂದ್ರ. ರಕ್ತ ಸಂಬಂಧಿಗಳೇ ಬೆಳ್ಳಂಬೆಳಗ್ಗೆಯೇ ಕಣ್ಣಿಗೆ ಖಾರದ ಪುಡಿ ಎರಚಿ ಕೊಚ್ಚಿ ಹಾಕಿದ್ದಾರೆ ಎಂದು ತಿಳಿದು ಬಂದಿದೆ.

ತಮ್ಮ ಹಾಗೂ ಅಕ್ಕಂದಿರಿಗೆ ಆಸ್ತಿಗಾಗಿ ಪರಸ್ಪರ ಗಲಾಟೆ ನಡೆಯುತ್ತಿತ್ತು. ಇದೇ ಕಾರಣಕ್ಕೆ ಮೂವರು ಸಹೋದರಿಯರು ಬಾವನ ಜೊತೆಗೂಡಿ ತಮ್ಮನನ್ನು ಮಲಗಿದ್ದಲ್ಲೇ ಮನಸ್ಸೋ ಇಚ್ಛೆ ಕೊಚ್ಚಿ ಹಾಕಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!