Thursday, June 25, 2026
Homeಕರಾವಳಿಉಡುಪಿಉಡುಪಿ; ಹೆಗಲಲ್ಲೊಂದು ಬ್ಯಾಗ್,ಚಪ್ಪಲಿ ಇಲ್ಲದೇ ಬರಿಗಾಲಲ್ಲಿ ರೈಲು ಏರಿದ ಕರಾವಳಿಯ ಶಾಸಕ; ಬೈಂದೂರು ಶಾಸಕ ಗುರುರಾಜ್...

ಉಡುಪಿ; ಹೆಗಲಲ್ಲೊಂದು ಬ್ಯಾಗ್,ಚಪ್ಪಲಿ ಇಲ್ಲದೇ ಬರಿಗಾಲಲ್ಲಿ ರೈಲು ಏರಿದ ಕರಾವಳಿಯ ಶಾಸಕ; ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಿಂಪ್ಲಿಸಿಟಿಯ ವಿಡಿಯೋ ವೈರಲ್

- Advertisement -
- Advertisement -

ಉಡುಪಿ; ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ಸಿಂಪ್ಲಿಸಿಟಿ ಮೂಲಕವೇ ಹೆಸರಾದವರು. ಅವರನ್ನು ನೋಡಿದ್ರೆ ಶಾಸಕರು ಇಷ್ಟು ಸರಳವಾಗಿರ್ತಾರಾ ಅಂತಾ ಅನ್ಸುತ್ತೆ. ಇದೀಗ ಅವರ ಸರಳತೆಯ ವಿಡಿಯೋವೊಂದು ವೈರಲ್ ಆಗಿದೆ.

ಹಗಲಲ್ಲೊಂದು ಬ್ಯಾಗ್,ಚಪ್ಪಲಿ ಇಲ್ಲದೇ ಬರಿಗಾಲಿನಲ್ಲಿ ಬೈಂದೂರು ಶಾಸಕ ಗುರುರಾಜ್ ಶೆಟ್ಟಿ ಗಂಟಿಹೊಳೆ ರೈಲು ನಿಲ್ದಾಣದಲ್ಲಿ ರೈಲಿಗಾಗಿ ನಡೆದುಕೊಂಡು ಹೋಗುತ್ತಿರುವ ವಿಡಿಯೋ ವೈರಲ್ ಆಗಿದೆ. ಬಿಳಿ ಶರ್ಟ್, ಬಿಳಿ ಪಂಚೆ ಧರಿಸಿ, ಒಂದು ಬ್ಯಾಗ್ ಹಾಕಿಕೊಂಡು ಸಿಂಪಲ್ ಆಗಿ ರೈಲಿನಲ್ಲಿ ಬೆಂಗಳೂರಿಗೆ ಪ್ರಯಾಣಿಸಿದ್ದಾರೆ.

ನೀವು ಬರಿಗಾಲಿನಲ್ಲಿಯೇ ನಡೆಯೋದು ಏಕೆ ಎಂದು ಕೇಳಿದರೆ, ಜನರ ತೊಂದರೆಗಳ ಬಗ್ಗೆ ನನಗೆ ಜಾಗೃತಿ ಮೂಡಿಸಿಕೊಳ್ಳಲು ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಂಡಿದ್ದೇನೆ. ಈ ಅಭ್ಯಾಸ ನನ್ನ ಕರ್ತವ್ಯಗಳನ್ನು ಪದೇ ಪದೇ ನೆನಪು ಮಾಡುತ್ತದೆ ಎಂದು ಶಾಸಕರು ಹೇಳಿದ್ದಾರೆ.

- Advertisement -

Latest News

error: Content is protected !!