Wednesday, June 3, 2026
Homeತಾಜಾ ಸುದ್ದಿತೆರೆ ಮೇಲೆ ಬರಲಿದೆ ಸಿಎಂ ಸಿದ್ದರಾಮಯ್ಯ ಅವರ ಬದುಕಿನ ಕಹಾನಿ

ತೆರೆ ಮೇಲೆ ಬರಲಿದೆ ಸಿಎಂ ಸಿದ್ದರಾಮಯ್ಯ ಅವರ ಬದುಕಿನ ಕಹಾನಿ

- Advertisement -
- Advertisement -

ಬೆಂಗಳೂರು : ಇಂದು ಸಿದ್ದರಾಮಯ್ಯ ಅವರು ರಾಜ್ಯದ ನೂತನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ರಾಜ್ಯದ ಮಾಸ್ ಲೀಡರ್ ಆಗಿ ಗುರುತಿಸಿಕೊಂಡಿರುವ ಸಿದ್ದರಾಮಯ್ಯ ಅವರ ಸಿನಿಮಾ ತೆರೆ ಬರಲಿದೆ.

ನಿರ್ದೇಶಕ ನಾಗರಾಜು ಬಿ ಎಂಬುವವರು ಈಗಾಗಲೇ ಸಿನಿಮಾದ ಪೋಸ್ಟರ್ ಹಂಚಿಕೊಂಡಿದ್ದು, ಸಿದ್ದರಾಮಯ್ಯ ಎಂಬ ನಾನು ಹೆಸರಿನಲ್ಲಿ ಸಿನಿಮಾ ಮಾಡಲು ಮುಂದಾಗಿದ್ದಾರೆ. ಸಿದ್ದರಾಮಯ್ಯ ಸಿಎಂ ಆಗುತ್ತಿದ್ದಂತೆ ಈ ಸಿನಿಮಾ ಘೋಷಣೆಯಾಗಿದೆ. ಸದ್ಯದಲ್ಲೇ ಸಿನಿಮಾದ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗಿದೆ.

ಈ ಹಿಂದೆ ಸತ್ಯರತ್ನ ಎಂಬುವವರು ಸಿದ್ದರಾಮಯ್ಯ ಬಯೋಪಿಕ್ ಆಧರಿಸಿ ಸಿನಿಮಾ ಮಾಡುವುದಾಗಿ ಹೇಳಿದ್ದರು. ಈ ಚಿತ್ರಕ್ಕೆ ಲೀಡರ್ ರಾಮಯ್ಯ ಎಂಬ ಹೆಸರಿಟ್ಟಿದ್ದರು. ಸಿನಿಮಾದ ಪೋಸ್ಟರ್ ಕೂಡ ಬಿಡುಗಡೆಯಾಗಿತ್ತು. ಆದರೆ ಸಿನಿಮಾದ ಬಗ್ಗೆ ನಂತರ ಯಾವ ಮಾಹಿತಿ ಕೂಡ ಲಭ್ಯವಾಗಿರಲಿಲ್ಲ. ಇದೀಗ ‘ಸಿದ್ದರಾಮಯ್ಯ ಎಂಬ ನಾನು’ ಸಿನಿಮಾವಾದರೂ ಸೆಟ್ಟೇರುತ್ತಾ ಎಂಬುದನ್ನು ಕಾದು ನೋಡಬೇಕಾಗಿದೆ

- Advertisement -

Latest News

error: Content is protected !!