Saturday, May 4, 2024
Homeತಾಜಾ ಸುದ್ದಿಸಿಎಂ ಆಗುತ್ತಿದ್ದಂತೆ ಕೋಟಿ ಬೆಲೆಯ ಕಾರಿನ ಒಡೆಯನಾದ ಸಿದ್ದರಾಮಯ್ಯ

ಸಿಎಂ ಆಗುತ್ತಿದ್ದಂತೆ ಕೋಟಿ ಬೆಲೆಯ ಕಾರಿನ ಒಡೆಯನಾದ ಸಿದ್ದರಾಮಯ್ಯ

spot_img
- Advertisement -
- Advertisement -

ಬೆಂಗಳೂರು; ಇಂದು ಸಿದ್ದರಾಮಯ್ಯ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದು ಇದೇ ಖುಷಿಯಲ್ಲಿ ಅವರು ಹೊಸ ಕಾರಿನ ಒಡೆಯರಾಗಿದ್ದಾರೆ. ಕೋಟಿ ರೂಪಾಯಿ ಬೆಲೆ ಬಾಳುವ ಕಾರನ್ನು ಸಿದ್ದು ಖರೀಸಿದ್ದಾರೆ.

ಟೋಯೋಟಾ ವೆಲ್‌ಫೈರ್ ಕಾರು ಖರೀದಿಸಿದ್ದಾರೆ. ಸಾಮಾನ್ಯವಾಗಿ ಸೆಲೆಬ್ರೆಟಿಗಳು, ಉದ್ಯಮಿಗಳು, ರಾಜಕಾರಣಿಗಳು ಹೆಚ್ಚಾಗಿ ಈ ಕಾರನ್ನು ತೆಗೆದುಕೊಳ್ಳುತ್ತಾರೆ. ಇದರ ಬೆಲೆ 96.55 ಲಕ್ಷ ರೂಪಾಯಿ. ವಿಮೆ, ರಿಜಿಸ್ಟ್ರೇಶನ್ ಸೇರಿದಂತೆ ಆನ್ ರೋಡ್ ಬೆಲೆ ಸರಿಸುಮಾರು 1.20 ಕೋಟಿ ರೂಪಾಯಿ. ಇದೇ ದುಬಾರಿ ಕಾರನ್ನು ಸಿದ್ದು ಖರೀಸಿದ್ದಾರೆ.

ಅಂದ ಹಾಗೆ ನೂತನ ಕಾರು ಸರ್ಕಾರದ ಕಾರಲ್ಲ. ಈ ಕಾರನ್ನು ಸಿದ್ದರಾಮಯ್ಯರ ವೈಯಕ್ತಿಕ ಖರೀದಿ ಅನ್ನೋ ಮಾತುಗಳು ಕೇಳಿಬರುತ್ತಿದೆ.  ಸಿದ್ದರಾಮಯ್ಯನವರಿಗೆ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸರ್ಕಾರಿ ಕಾರು ಲಭ್ಯವಾಗಲಿದೆ. ಆದರೆ ಸಿದ್ದು ವೈಯಕ್ತಿಕ ಬಳಕೆಗೆ ಟೋಯೋಟಾ ವೆಲ್‌ಫೈರ್ ಕಾರು ಬಳಸಬಹುದು ಎನ್ನಲಾಗಿದೆ.

- Advertisement -
spot_img

Latest News

error: Content is protected !!