Thursday, March 28, 2024
HomeUncategorizedಬೆಂಗಳೂರಿನ ರೋಮ್ಯಾಂಟಿಕಾಡೆವಿ ತಳಿಯ ಸೈಬೀರಿಯನ್ ಹಸ್ಕಿಗೆ ಅಮೇರಿಕನ್‍ ಚಾಂಪಿಯನ್ ಪಟ್ಟ !….

ಬೆಂಗಳೂರಿನ ರೋಮ್ಯಾಂಟಿಕಾಡೆವಿ ತಳಿಯ ಸೈಬೀರಿಯನ್ ಹಸ್ಕಿಗೆ ಅಮೇರಿಕನ್‍ ಚಾಂಪಿಯನ್ ಪಟ್ಟ !….

spot_img
- Advertisement -
- Advertisement -

ಬೆಂಗಳೂರು: ಇಲ್ಲಿನ ರೋಮ್ಯಾಂಟಿಕಾಡೆವಿ ತಳಿಯ ಸೈಬೀರಿಯನ್ ಹಸ್ಕಿ ಎಂಬ ಹೆಸರಿನ ಶ್ವಾನಕ್ಕೆಅತ್ಯುತ್ತಮ ತಳಿ ಎಂಬ ಅಮೇರಿಕನ್‍ ಚಾಂಪಿಯನ್ ಪಟ್ಟ ಲಭಿಸಿದೆ. ರೊಮ್ಯಾಂಟಿಕಾಡೆವಿ 2017ರ ಏಪ್ರಿಲ್ 1ರಂದು ಜನಿಸಿದ್ದು, ಇಂಟರ್‍ನ್ಯಾಷನಲ್ ಎಫ್‍ಸಿಐ ಡಾಗ್ ಶೋನಲ್ಲಿ ಪಾಲ್ಗೊಳ್ಳುವ ಮೂಲಕ ಪ್ರದರ್ಶನಕ್ಕೆ ಪಾದಾರ್ಪಣೆ ಮಾಡಿತ್ತಲ್ಲದೇ ಅತ್ಯುತ್ತಮ ಶ್ವಾನ ಎಂಬ ಪ್ರಶಸ್ತಿಯನ್ನೂ ಪಡೆದಿದೆ.

ಇದಾದ ಬಳಿಕ ದೇಶದ ಚಾಂಪಿಯನ್‍ಶಿಪ್‍ಗಳಲ್ಲಿ ಅತ್ಯುತ್ತಮ ಹೆಣ್ಣು ಹಸ್ಕಿ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿದೆ. ಬೆಂಗಳೂರಿನ ಮನೋಜ್ ಕೃಷ್ಣ ಸಿ. ಅವರು ಸಾಕುತ್ತಿರುವ ಶ್ವಾನಕ್ಕೆ ಇತ್ತೀಚೆಗೆ ನಡೆದ ಅಮೇರಿಕನ್ ಕೆನ್ನೆಲ್ ಕ್ಲಬ್ ಡಾಗ್ ಶೋನಲ್ಲಿ ಪ್ರಶಸ್ತಿ ಸಂದಿದೆ.ಈ ಹಿಂದೆ ಮನೋಜ್ ಕೃಷ್ಣ ದೇಶಾದ್ಯಂತ ನಡೆಯುವ ಹಲವಾರು ಶ್ವಾನ ಪ್ರದರ್ಶನದಲ್ಲಿ ಭಾಗಿಯಾಗಿದ್ದಾರೆ.

ಇವರು ರಷ್ಯಾ, ದಕ್ಷಿಣಕೊರಿಯಾ, ಬೆಲಾರಸ್ ಮತ್ತು ರೊಮೇನಿಯಾದಲ್ಲಿ ಅತ್ಯಂತ ಜನಪ್ರಿಯವಾಗಿರುವ ವಿಶ್ವದ ಅತ್ಯುತ್ತಮ ತಳಿಗಳು ಎನಿಸಿರುವ ಸೈಬೀರಿಯನ್ ಹಸ್ಕಿ ಮತ್ತುಚೋವ್‍ಚೋವ್ ಎಂಬ ಶ್ವಾನದ ತಳಿಗಳನ್ನು ಹೊಂದಿದ್ದಾರೆ.

- Advertisement -
spot_img

Latest News

error: Content is protected !!