Thursday, June 4, 2026
Homeಉತ್ತರ ಕನ್ನಡವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಎರಡು ಅಂಗಡಿ ಭಸ್ಮ

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ಗೆ ಎರಡು ಅಂಗಡಿ ಭಸ್ಮ

- Advertisement -
- Advertisement -

ಉತ್ತರಕನ್ನಡ: ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಎರಡು ಅಂಗಡಿಗಳು ಹೊತ್ತಿ ಉರಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ನಡೆದಿದೆ.‌

ಇಂದು ನಸುಕಿನ ಜಾವ ಬೆಂಕಿ ತಗುಲಿದ್ದು, ಶಿರಸಿ ನಗರದ ನಟರಾಜ್ ರಸ್ತೆ ಬಳಿ‌ ಘಟನೆ ನಡೆದಿದೆ. ಘಟನೆಯಲ್ಲಿ ಎಂಟು ಲಕ್ಷಕ್ಕೂ ಹೆಚ್ಚಿನ ಹಾನಿ ಸಂಭವಿಸಿರುವ ಬಗ್ಗೆ ಅಂದಾಜಿಸಲಾಗಿದ್ದು, ನಟರಾಜ ರಸ್ತೆಯ ರಂಗನಾಥ ರಾಯ್ಕರ್ ಎಂಬವರಿಗೆ ಸೇರಿದ ಪರ್ಲ್ ಬ್ಯೂಟಿಕ್ ಸ್ಟೋರ್ ಮತ್ತು ಭಾರತಿ ಮಡಿವಾಳ ಅವರಿಗೆ ಸೇರಿದ ಮೇಘನಾ ಟೈಲರ್ ಅಂಗಡಿ ಸಂಪೂರ್ಣ ಭಸ್ಮವಾಗಿದೆ.

ಸ್ಥಳಕ್ಕೆ ಅಗ್ನಿಶಾಮಕ ದಳ ದೌಡಾಯಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ಶಿರಸಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

- Advertisement -

Latest News

error: Content is protected !!