Friday, June 5, 2026
Homeಕರಾವಳಿಮಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾರ್ಮಿಕನನ್ನು ಕೊಂದ ಅಂಗಡಿ ಮಾಲೀಕ

ಮಂಗಳೂರು: ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾರ್ಮಿಕನನ್ನು ಕೊಂದ ಅಂಗಡಿ ಮಾಲೀಕ

- Advertisement -
- Advertisement -

ಮಂಗಳೂರು: ಅಂಗಡಿ ಮಾಲೀಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕಾರ್ಮಿಕನನ್ನು ಕೊಂದ ಘಟನೆ ಮಂಗಳೂರಿನಲ್ಲಿ ನಡೆದಿದೆ

ಮಂಗಳೂರಿನ ಮುಳಿಹಿತ್ಲು ಜಂಕ್ಷನ್ ಬಳಿ ಘಟನೆ‌ ನಡೆದಿದ್ದು, ಉತ್ತರ ಭಾರತ ಮೂಲದ ಗಜ್ಞಾನ್ ಅಲಿಯಾಸ್ ಜಗು ಎಂಬ ಕಾರ್ಮಿಕನನ್ನು
ಮಶುಪಾ ಜನರಲ್ ಸ್ಟೋರ್ ಮಾಲೀಕ ತೌಸಿಫ್ ಹುಸೈನ್ ಎಂಬಾತ ಕೊಲೆ ಮಾಡಿರುವುದಾಗಿ ಹೇಳಲಾಗಿದೆ.

ಬೆಂಕಿ ಹಚ್ಚಿ ಕೊಂದ ಬಳಿಕ ಆರೋಪಿ ವಿದ್ಯುತ್ ಶಾಕ್ ಅಂತಾ ಬಂದು ಪೊಲೀಸ್ ದೂರು ನೀಡಿದ್ದಾನೆ.ಶನಿವಾರ ಬೆಳಗ್ಗೆ 7.30 ಕ್ಕೆ ಕೃತ್ಯ ಎಸಗಿದ್ದು, ಬಳಿಕ ಮಧ್ಯಾಹ್ನ 1.30 ಕ್ಕೆ ವೆನ್ಲಾಕ್ ಆಸ್ಪತ್ರೆಗೆ ರವಾನೆ ಮಾಡಿ ವಿದ್ಯುತ್ ಶಾಕ್ ನಿಂದ ಘಟನೆ ಅಂತಾ ತಿರುಚಲು ಯತ್ನಿಸಿದ್ದಾನೆ.

ಆದ್ರೆ ಪೊಲೀಸರ ಅನುಮಾನದಿಂದ ವಿಚಾರಿಸಿದಾಗ ಕೃತ್ಯ ಬಯಲಾಗಿದ್ದು, ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆರೋಪಿ ತೌಸಿಫ್ ಹುಸೈನ್ ಅನ್ನು ಪೊಲೀಸರು ಬಂಧಿಸಿದ್ದಾರೆ.

- Advertisement -

Latest News

error: Content is protected !!