Tuesday, June 30, 2026
Homeಕರಾವಳಿಬಂಟ್ವಾಳ; ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆ ಸಾವು ಪ್ರಕರಣ; ಗಾಯಗೊಂಡ ಯುವತಿಯ ಆರೋಗ್ಯ...

ಬಂಟ್ವಾಳ; ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆ ಸಾವು ಪ್ರಕರಣ; ಗಾಯಗೊಂಡ ಯುವತಿಯ ಆರೋಗ್ಯ ವಿಚಾರಿಸಿದ ಶಾಸಕ ರಾಜೇಶ್ ನಾಯ್ಕ್

- Advertisement -
- Advertisement -

ಬಂಟ್ವಾಳದ ನಂದಾವರದಲ್ಲಿ ಮನೆ ಮೇಲೆ ಗುಡ್ಡ ಕುಸಿದು ಬಿದ್ದು ಮಹಿಳೆ ಸಾವನ್ನಪ್ಪಿ, ಯುವತಿ ಸಫಾ ಗಾಯಗೊಂಡಿದ್ದರು. ಶಾಸಕ ರಾಜೇಶ್ ನಾಯ್ಕ್ ಗಾಯಗೊಂಡ ಯುವತಿ ಸಫಾ ಆರೋಗ್ಯ ವಿಚಾರಿಸಿದ್ದಾರೆ.

ಮಂಗಳೂರಿನ ತೇಜಸ್ವಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಫಾ ಅವರನ್ನು ಭೇಟಿಯಾಗಿ ಬಂಟ್ವಾಳ ಕ್ಷೇತ್ರದ ಶಾಸಕ ರಾಜೇಶ್ ನಾಯಕ್ ಆರೋಗ್ಯ ವಿಚಾರಿಸಿದ್ದಾರೆ.

ಈ ವೇಳೆ ಇವರ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ವೈಯಕ್ತಿಕವಾಗಿ ಭರಿಸಲಾಗುವುದು ಹಾಗೂ ಅವಘಡದಿಂದ ಮನೆಗೆ ಆಗಿರುವ ಹಾನಿಗೆ ಸೂಕ್ತ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಯವರಿಗೆ ಸೂಚಿಸಲಾಗಿದೆ ಎಂದು ಶಾಸಕರು ಹೇಳಿದ್ದಾರೆ.

- Advertisement -

Latest News

error: Content is protected !!