- Advertisement -
![]()
- Advertisement -
ಮಂಗಳೂರು: ನಕಲಿ ಟ್ವಿಟರ್ ಖಾತೆ ಸೃಷ್ಟಿಸಿ ತುಳುನಾಡಿನ ದೈವಾರಾಧನೆ ಹಾಗೂ ಮಹಿಳೆಯರ ಕುರಿತು ಅಶ್ಲೀಲ ಪೋಸ್ಟ್ ಮಾಡಿದ ಆರೋಪಿಯನ್ನು ಸೆನ್ ಕ್ರೈಂ ಪೊಲೀಸರು ಬಂಧಿಸಿದ್ದಾರೆ.ಬೆಂಗಳೂರಿನ ಅಮೃತಹಳ್ಳಿಯ ಜಕ್ಕೂರು ಮುಖ್ಯ ರಸ್ತೆಯ ನಿವಾಸಿ ಶಿವರಾಜ್ ಹೆಚ್.ಕೆ(37) ಬಂಧಿತ ಆರೋಪಿ.
ಈತನ ವಿರುದ್ಧ ದೈವಾರಾಧನೆ ಸಂರಕ್ಷಣಾ ವೇದಿಕೆ (ರಿ) ದೂರು ದಾಖಲಿಸಿತ್ತು.ಅದರಂತೆ ಮಂಗಳೂರು ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಅವರ ಮಾರ್ಗದರ್ಶನದಲ್ಲಿ ಸಿಸಿಬಿ ಎಸಿಬಿ ಪಿ.ಎ.ಹೆಗ್ಡೆ ಅವರ ನೇತೃತ್ವದಲ್ಲಿ ಸೆನ್ ಕ್ರೈಂ ಪೊಲೀಸ್ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ಎಂ.ಪಿ ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.
- Advertisement -


