Friday, June 5, 2026
Homeಕರಾವಳಿಬಂಟ್ವಾಳ: ಓಮ್ನಿಗೆ ಸ್ವಿಫ್ಟ್ ಕಾರು ಡಿಕ್ಕಿ; ಕಾರಿನದಲ್ಲಿವರಿಗೆ ಗಂಭೀರ ಗಾಯ

ಬಂಟ್ವಾಳ: ಓಮ್ನಿಗೆ ಸ್ವಿಫ್ಟ್ ಕಾರು ಡಿಕ್ಕಿ; ಕಾರಿನದಲ್ಲಿವರಿಗೆ ಗಂಭೀರ ಗಾಯ

- Advertisement -
- Advertisement -

ಬಂಟ್ವಾಳ: ಓಮ್ನಿಗೆ ಸ್ವಿಫ್ಟ್ ಕಾರು ಡಿಕ್ಕಿಯಾಗಿ ಕಾರಿನದಲ್ಲಿವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಬೆಳಿಗ್ಗೆ ಬಿಸಿರೋಡು ಬೆಳ್ತಂಗಡಿ ರಾಜ್ಯ ಹೆದ್ದಾರಿಯ ಪರ್ಲ ಚರ್ಚ್ ಸಮೀಪ ನಡೆದಿದೆ.

ಓಮ್ನಿ ಚಾಲಕ ರಾಯಿಸನ್ ಹಾಗೂ ಮಕ್ಕಳು ಸೇರಿ ಮೂರು ಜನ ಭಾನುವಾರವಾಗಿದ್ದರಿಂದ ಚರ್ಚ್ ಗೆ ಪೂಜೆಗೆಂದು ಹೋಗುತ್ತಿದ್ದರು. ಈ ವೇಳೆ ಓಮ್ನಿಗೆ ಹಿಂಬದಿಯಿಂದ ಬಂದ ಸ್ವಿಫ್ಟ್ ಕಾರು ಡಿಕ್ಕಿಯಾಗಿದೆ. ಡಿಕ್ಕಿಯ ರಭಸಕ್ಕೆ ಒಮ್ನಿ ಕಾರು ಪಲ್ಟಿಯಾಗಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.  ಸ್ವಿಫ್ಟ್ ಕಾರು ಚಾಲಕ ಆದಿಲ್ ಎಂಬವರಿಗೂ ಗಾಯವಾಗಿದೆ.

ಎರಡು ಕಾರುಗಳು ವಗ್ಗದಿಂದ ಬರುತ್ತಿದ್ದು, ಪರ್ಲ ಚರ್ಚ್ ಬಳಿಗೆ ಬರುತ್ತಿದ್ದಂತೆ ಓಮ್ನಿ ಕಾರು ಚರ್ಚ್ ಗೆ ಹೋಗುವ ಉದ್ದೇಶದಿಂದ ಕಾರನ್ನು ತಿರುಗಿಸುವ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಹಿಂಬದಿಯಿಂದ ಓಮ್ನಿಗೆ ಕಾರಿಗೆ ಡಿಕ್ಕಿ ಹೊಡೆದಿದೆ.ಡಿಕ್ಕಿ ಯ ರಭಸಕ್ಕೆ ಓಮ್ನಿ ಕಾರನ್ನು ಸುಮಾರು ದೂರು ದೂಡಿಕೊಂಡು ಹೋಗಿದ್ದಲ್ಲದೆ ಕಾರು ಪಲ್ಟಿಯಾಗಿದೆ. ಕಾರಿನೊಳಗಿದ್ದ ಪ್ರಯಾಣಿಕರನ್ನು ಹಿಂಬದಿಯ ಗಾಜು ಒಡೆದು ಹೊರಕ್ಕೆ ತೆಗೆಯಲಾಗಿದೆ.ಘಟನಾ ಸ್ಥಳಕ್ಕೆ ಬಂಟ್ವಾಳ ಪೋಲೀಸರು ಬೇಟಿ ನೀಡಿದ್ದಾರೆ.

- Advertisement -

Latest News

error: Content is protected !!