Thursday, June 4, 2026
Homeತಾಜಾ ಸುದ್ದಿಬಂಟ್ವಾಳದ ಕೈಕಂಬದಲ್ಲಿ ಬುರ್ಖಾ ಅಂಗಡಿ ಮಾಲೀಕ ನೇಣಿಗೆ ಶರಣು

ಬಂಟ್ವಾಳದ ಕೈಕಂಬದಲ್ಲಿ ಬುರ್ಖಾ ಅಂಗಡಿ ಮಾಲೀಕ ನೇಣಿಗೆ ಶರಣು

- Advertisement -
- Advertisement -

ಬಂಟ್ವಾಳ: ಬುರ್ಖಾ ಅಂಗಡಿಯೊಂದರ ಮಾಲೀಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಬಿ.ಸಿ.ರೋಡ್ ನ ಕೈಕಂಬದಲ್ಲಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಕೈಕಂಬ ಸಮೀಪದ ಪರ್ಲ್ಯ ನಿವಾಸಿ, ಲಿಬಾಸ್ ಬುರ್ಖಾ ಮಳಿಗೆಯ ಮಾಲಕ ಅಬ್ದುಲ್ ರಹ್ಮಾನ್ (36) ಎಂದು ಗುರುತಿಸಲಾಗಿದೆ.

ನಿನ್ನೆ ಎಂದಿನಂತೆ ಲಿಬಾಸ್ ಅಂಗಡಿಗೆ ತೆರಳಿದ್ದು, ಅಂಗಡಿಯ ಮೇಲಂತಸ್ತಿನಲ್ಲಿರುವ ಕೊಠಡಿಯೊಂದರಲ್ಲಿ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮೇಲಂತಸ್ತಿಗೆ ತೆರಳುವ ಮುನ್ನ ಅಂಗಡಿಯ ಕೆಲಸದಾಕೆಯ ಬಳಿ ತನ್ನ ಮೊಬೈಲ್ ಗೆ ಕರೆ ಬಂದರೆ ಸ್ವೀಕರಿಸದಂತೆ ಹೇಳಿ ತೆರಳಿದ್ದು, ಕೆಲವು ಸಮಯದ ಬಳಿಕ ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಘಟನೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಮೃತರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ. ಸ್ಥಳಕ್ಕೆ ಬಂಟ್ವಾಳ ನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

- Advertisement -

Latest News

error: Content is protected !!