Wednesday, June 3, 2026
Homeಕರಾವಳಿಪುತ್ತೂರಿನಲ್ಲಿ ಮನೆ ಜಪ್ತಿಗೆ ಬಂದ ಬ್ಯಾಂಕ್ ಸಿಬ್ಬಂದಿ: ಅವಮಾನ ತಾಳಲಾರದೇ ಮಹಿಳೆ ನೇಣಿಗೆ ಶರಣು

ಪುತ್ತೂರಿನಲ್ಲಿ ಮನೆ ಜಪ್ತಿಗೆ ಬಂದ ಬ್ಯಾಂಕ್ ಸಿಬ್ಬಂದಿ: ಅವಮಾನ ತಾಳಲಾರದೇ ಮಹಿಳೆ ನೇಣಿಗೆ ಶರಣು

- Advertisement -
- Advertisement -

ಪುತ್ತೂರು:  ಬ್ಯಾಂಕ್ ಲೋನ್ ಕಟ್ಟಿಲ್ಲ ಅಂತಾ ಬ್ಯಾಂಕ್ ಸಿಬ್ಬಂದಿ ಮನೆ ಮುಟ್ಟುಗೋಲಿಗೆ ಬಂದ್ರು ಅಂತಾ ಅವಮಾನಗೊಂಡ ಮಹಿಳೆಯೊಬ್ಬರು ಡೆತ್ ನೋಟು ಬರೆದಿಟ್ಟು ಸಾವಿಗೆ ಶರಣಾದ ಘಟನೆ ಪುತ್ತೂರಿನ ಹಾರಾಡಿ ರೈಲ್ವೇ ರಸ್ತೆಯ ಬಳಿ ನಡೆದಿದೆ.

ಆತ್ಮಹತ್ಯೆಗೆ ಶರಣಾದವರನ್ನು ಪುತ್ತೂರಿನ ಉದ್ಯಮಿ ಹಾರಾಡಿ ರೈಲ್ವೇ ನಿಲ್ದಾಣ ರಸ್ತೆ ನಿವಾಸಿ ರಘುವೀರ್ ಪ್ರಭು ಅವರ ಪತ್ನಿ ಪ್ರಾರ್ಥನಾ ಪ್ರಭು (52ವ) ಎಂದು ಗುರುತಿಸಲಾಗಿದೆ. ಇನ್ನು ಪ್ರಾರ್ಥನಾ ಆತ್ಮಹತ್ಯೆಗೂ ಮುನ್ನ ‘ನನ್ನ ಸಾವಿಗೆ ಕೆನರಾ ಬ್ಯಾಂಕ್‌ ನವರ ಕಿರಿಕಿರಿ ಹಾಗೂ ಮೆಂಟಲ್ ಟೋರ್ಚರ್ ತಾಳಲಾರದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆʼ ಎಂದು ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದಾರೆ.

ಇವರಿಗೆ ಕೆನರಾ ಬ್ಯಾಂಕ್‌ ನಲ್ಲಿ ಸಾಲವಿದ್ದು, ಸಾಲ ಮರುಪಾವತಿ ಮಾಡಿಲ್ಲ ಎಂದು ಬ್ಯಾಂಕ್ ನೋಟೀಸ್ ಬಂದಿತ್ತು. ಬಳಿಕ ಕೋರ್ಟ್ ನೋಟೀಸ್ ಮೂಲಕ ಮನೆ ಮುಟ್ಟುಗೋಲು ಹಾಕಲು ನಿನ್ನೆ  ಬ್ಯಾಂಕ್ ಸೀಸರ್ ಜೊತೆ ಬಂದಿದ್ದಾರೆ. ಈ ವೇಳೆ ಮನೆ ಮಂದಿ ಆತಂಕಕ್ಕೆ ಒಳಗಾಗಿದ್ದರು. ಇದರ ಮಧ್ಯೆ ಪ್ರಾರ್ಥನಾ ನೇಣಿಗೆ ಶರಣಾಗಿದ್ದಾರೆ.

- Advertisement -

Latest News

error: Content is protected !!