- Advertisement -
- Advertisement -
ಶಿವಮೊಗ್ಗ: ಲಾಕ್ಡೌನ್ ಜಾರಿಯಲ್ಲಿರುವುದರಿಂದ ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಇದೇ ಸಮಯವನ್ನು ದುರ್ಬಳಕೆ ಮಾಡಿಕೊಂಡ ಕೆಲವರು ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದಾರೆ.
ಕೆಲವು ಮದ್ಯದಂಗಡಿ ಮಾಲೀಕರು ತಾವೇ ಕಳ್ಳತನ ಮಾಡಿ ಮದ್ಯವನ್ನು ಕಾಳಸಂತೆಯಲ್ಲಿ ಅತಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿರುವುದು ಗೊತ್ತಾಗಿದೆ. ಶಿವಮೊಗ್ಗದ ಬಾರ್ ಒಂದರ ಮಾಲೀಕರ ಮಗ 90 ರೂಪಾಯಿಯ ಮದ್ಯವನ್ನು 1000 ರೂಪಾಯಿಗೆ ಮಾರಾಟ ಮಾಡುವ ಸಂದರ್ಭದಲ್ಲಿ ಸಿಕ್ಕಿಬಿದ್ದಿದ್ದಾನೆ.
ಪ್ರಮೋದ್ ಎಂಬಾತ ತನ್ನ ಸಹಾಯಕ ಅರ್ಜುನ್ ಮೂಲಕ 90 ರೂಪಾಯಿ ಬೆಲೆಯ ವಿಸ್ಕಿಯನ್ನು 1000 ರೂಪಾಯಿಗೆ ಮಾರಾಟ ಮಾಡುತ್ತಿರುವ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಬಂಧ ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
- Advertisement -