- Advertisement -
- Advertisement -
ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಸೋಂಕಿಗೆ ಸಾವನ್ನಪ್ಪುತ್ತಿರುವವರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಸಿಂಗಾಪುರ ವಿಶ್ವವಿದ್ಯಾಲಯ ಒಳ್ಳೆಯ ಸುದ್ದಿ ನೀಡಿದೆ. ಕೊರೊನಾ ವೈರಸ್ ಭಾರತದಲ್ಲಿ ಮೇ 20 ರ ಸುಮಾರಿಗೆ ಕೊನೆಗೊಳ್ಳಲಿದೆ ಎಂದಿದೆ.
ಕೃತಕ ಬುದ್ಧಿಮತ್ತೆಯ ಮೂಲಕ ಕೊರೊನಾ ವೈರಸ್ ಹರಡುವ ವೇಗವನ್ನು ಸಿಂಗಾಪುರ ತಂತ್ರಜ್ಞಾನ ಮತ್ತು ವಿನ್ಯಾಸ ವಿಶ್ವವಿದ್ಯಾಲಯ ವಿಶ್ಲೇಷಿಸಿದೆ. ವಿಶ್ವವಿದ್ಯಾನಿಲಯದ ಪ್ರಕಾರ, ಗುಣಮುಖ ರೋಗಿ ಹಾಗೂ ಸೋಂಕಿಗೆ ಒಳಪಡುವ ರೋಗಿಗಳ ಡೇಟಾವನ್ನು ಇದು ಆಧರಿಸಿದೆ.
ಕೊರೊನಾ ಸೋಂಕಿರುವ ಎಲ್ಲ ದೇಶಗಳ ಮಾಹಿತಿಯ ಮೂಲಕ ವಿಶ್ವವಿದ್ಯಾಲಯವು ಸಂಶೋಧನೆ ನಡೆಸಿದೆ. ಇಟಲಿ ಹಾಗೂ ಸ್ಪೇನ್ ನಲ್ಲಿ ಮೇ ಮೊದಲ ವಾರದಲ್ಲಿ ಇದು ಕೊನೆಗೊಳ್ಳಲಿದೆ ಎಂದು ಅಂದಾಜಿಸಲಾಗಿದೆ. ಭಾರತದಲ್ಲಿ ಹೊಸ ಪ್ರಕರಣಗಳ ಬೆಳವಣಿಗೆಯ ದರವು ಆರು ಪ್ರತಿಶತದಷ್ಟು ದಾಖಲಾಗಿದೆ. ಲಾಕ್ ಡೌನ್ ದೇಶದಲ್ಲಿ ಉತ್ತಮ ಪರಿಣಾಮ ಬೀರುತ್ತಿದೆ.
- Advertisement -