Friday, September 13, 2024
Homeಕರಾವಳಿಬಂಟ್ವಾಳ: 624 ವಲಸೆಕಾರ್ಮಿಕರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸಿದ ಶಾಸಕ ರಾಜೇಶ್ ನಾಯ್ಕ್

ಬಂಟ್ವಾಳ: 624 ವಲಸೆಕಾರ್ಮಿಕರನ್ನು ಸುರಕ್ಷಿತವಾಗಿ ಊರಿಗೆ ತಲುಪಿಸಿದ ಶಾಸಕ ರಾಜೇಶ್ ನಾಯ್ಕ್

spot_img
- Advertisement -
- Advertisement -

ಬಂಟ್ವಾಳ: ಲಾಕ್ ಡೌನ್ ನಿಂದಾಗಿ ತಾಲೂಕಿನ ನಾನಾ ಕಡೆ ತಮ್ಮ ಊರಿಗೆ ಹೋಗಲಾರದೆ ಸಿಲುಕಿ ಹಾಕಿಕೊಂಡಿದ್ದ ವಲಸೆ ಕಾರ್ಮಿಕರನ್ನು ಶಾಸಕ ರಾಜೇಶ್ ನಾಯ್ಕ್ ಹಾಗೂ ತಹಶೀಲ್ದಾರ್ ರಶ್ಮಿ.ಎಸ್.ಆರ್ ಅವರ ತಾಲೂಕು ಆಡಳಿತದ ತಂಡದ ನೇತೃತ್ವದಲ್ಲಿ ಊರಿಗೆ ಕಳುಹಿಸಿಕೊಟ್ಟರು.

ವಲಸೆ ಕಾರ್ಮಿಕರಿಗೆ ರಾಜ್ಯದ ಒಳಗಡೆ ಅವರವರ ಊರಿಗೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿರುವ ಬೆನ್ನಲ್ಲೇ, ಸುಮಾರು 624 ಕಾರ್ಮಿಕರನ್ನು ಶಾಸಕರು, ತಾಲೂಕು ಆಡಳಿತ ಸರ್ಕಾರಿ ಬಸ್​​ಗಳಲ್ಲಿ ಅವರ ಊರಿಗೆ ಕಳುಹಿಸಿಕೊಟ್ಟಿರುವ ಬಗ್ಗೆ ಅಧಿಕೃತ ಮಾಹಿತಿ ಲಭ್ಯವಾಗಿದೆ.

ಕೃಷಿ ಚಟುವಟಿಕೆ, ರಸ್ತೆ, ಕಟ್ಟಡ ಕಾಮಗಾರಿ ಸೇರಿದಂತೆ ಹಲವು ಕೆಲಸಗಳಿಗಾಗಿ ವಿವಿಧ ಊರುಗಳಿಂದ ಬಂದು ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಸಿಲುಕಿದ್ದ ವಲಸೆ ಕಾರ್ಮಿಕರಿಗೆ ಊರಿಗೆ ಹೋಗಲು ಸರ್ಕಾರ ಅವಕಾಶ ಮಾಡಿಕೊಟ್ಟಿದೆ. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು, ಸಹಾಯಕ ಕಮಿಷನರ್ ಮದನ್ ಮೋಹನ್ ತಹಶೀಲ್ದಾರ್ ರಶ್ಮಿ. ಎಸ್.ಆರ್. ಇ.ಒ.ರಾಜಣ್ಣ, ಎಸ್.ಐ.ಗಳಾದ ಅವಿನಾಶ್ ಮತ್ತು ಪ್ರಸನ್ನ ಅವರ ನೇತೃತ್ವದಲ್ಲಿ ಸುಮಾರು 624 ವಲಸೆ ಕಾರ್ಮಿಕರನ್ನು ಅವರವರ ಸ್ವಂತ ಊರಿಗೆ ಏ.25 ರಂದು ರಾತ್ರಿ 28 ಕೆ.ಎಸ್.ಆರ್.ಟಿ.ಸಿ ಬಸ್‌ಗಳಲ್ಲಿ ಕಳುಹಿಸಲಾಯಿತು.

ಸ್ಯಾನಿಟೈಸೇಷನ್ ಮಾಡಿದ ಒಂದು ಬಸ್​​ನಲ್ಲಿ 23 ಮಂದಿಗೆ ಅವಕಾಶ:
ಸರ್ಕಾರದ ಸಾರಿಗೆ ವ್ಯವಸ್ಥೆಯಲ್ಲಿ ವಲಸೆ ಕಾರ್ಮಿಕರನ್ನು ಅವರ ಸ್ವಂತ ಊರಿಗೆ ಕಳುಹಿಸುವ ನಿಟ್ಟಿನಲ್ಲಿ ಸಾರಿಗೆ ಬಸ್‌ನಲ್ಲಿ ಶೇ.40 ಅಂದರೆ ಬಸ್‌ನಲ್ಲಿ ಅಂತರ ಕಾಯ್ದುಕೊಳ್ಳುವ ದೃಷ್ಟಿಯಿಂದ ಒಂದು ಬಸ್​ನಲ್ಲಿ ತಲಾ 20-23 ಮಂದಿ ಕಾರ್ಮಿಕರಿಗೆ ಮಾತ್ರ ಕೂರಲು ಅವಕಾಶ ಕಲ್ಪಿಸಲಾಗಿದೆ. ಜೊತೆಗೆ ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಬಂಟ್ವಾಳ ತಾ.ಪಂನಲ್ಲಿ ವಲಸೆ ಕಾರ್ಮಿಕರ ಪಟ್ಟಿಯನ್ನು ಮಾಡಲಾಗಿದ್ದು, ಬಿಸಿರೋಡು ಖಾಸಗಿ ಬಸ್ ನಿಲ್ದಾಣದಲ್ಲಿ ಹಾಗೂ ಕೆ.ಎಸ್.ಆರ್.ಟಿ.ಸಿ.ಬಸ್ ನಿಲ್ದಾಣದಲ್ಲಿ ಸಂಪೂರ್ಣ ವ್ಯವಸ್ಥೆ ಮಾಡಲಾಗಿತ್ತು.

624 ಮಂದಿ ಬಸ್‌ನಲ್ಲಿ ಊರಿಗೆ ಮರಳಿದರು

ತಾಲೂಕಿನಲ್ಲಿ ವಲಸೆ ಕಾರ್ಮಿಕರು ಎಷ್ಟಿದ್ದಾರೆ, ಯಾವ ಊರಿನವರು ಎಂದು ತಾಲೂಕು ಆಡಳಿತ ಹಾಗೂ ತಾಲೂಕು ಪಂಚಾಯತ್ ವ್ಯಾಪ್ತಿಯಲ್ಲಿ ಪಟ್ಟಿ ಮಾಡಲಾಗಿತ್ತು. ಈ ಪೈಕಿ ಗದಗಕ್ಕೆ , ರಾಯಚೂರು , ಬಾಗಲಕೋಟೆ, ಬಿಜಾಪುರ, ಕೊಪ್ಪಳ ಪ್ರದೇಶದ ವಲಸೆ ಕಾರ್ಮಿಕ ರನ್ನು 28 ಬಸ್ ಗಳ ಮೂಲಕ ಕಳುಹಿಸಲಾಯಿತು. ಊರಿಗೆ ಹೋಗಲು ವ್ಯವಸ್ಥೆಯ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ವಲಸೆ ಕಾರ್ಮಿಕರು ಖುಷಿಯಿಂದ ಬಿಸಿರೋಡಿಗೆ ಬಂದು ಸೇರಿದ್ದರು.

ಥರ್ಮಲ್ ಸ್ಕ್ರೀನಿಂಗ್​​:

ಎಲ್ಲಾ ವಲಸೆ ಕಾರ್ಮಿಕರಿಗೆ ಥರ್ಮಲ್ ಸ್ಕ್ರೀನಿಂಗ್​​ ಮಾಡಿಯೇ ಕಳುಹಿಸಲಾಗಿದೆ. ಬಂಟ್ವಾಳ ಆರೋಗ್ಯಾಧಿಕಾರಿ ಡಾ. ದೀಪಾ ಪ್ರಭು ಅವರ ನೇತೃತ್ವದಲ್ಲಿ ವೈದ್ಯರು ಮತ್ತು ಸಿಬ್ಬಂದಿ ವೈದ್ಯಕೀಯ ತಪಾಸಣೆ ನಡಸಿದರು.

ಶಾಸಕರಿಂದ ಊಟ ಉಪಚಾರದ ವ್ಯವಸ್ಥೆ

ಎಲ್ಲಾ ವಲಸೆ ಕಾರ್ಮಿಕರಿಗೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರ ಸ್ವಂತ ಖರ್ಚಿನಲ್ಲಿ ಊಟ , ನೀರು,ಮಾಸ್ಕ್ ಹಾಗೂ ನಾಳೆ ಬೆಳಿಗ್ಗೆ ಗೆ ಬೇಕಾದ ಚಾ-ತಿಂಡಿಯ ವ್ಯವಸ್ಥೆ ಮಾಡಿಕೊಡಲಾಗಿತ್ತು. ಪ್ರತಿಯೊಬ್ಬರ ಯೋಗಕ್ಷೇಮ ವಿಚಾರಿಸಿ ಬಳಿಕ ಚಾಲಕರಿಗೂ ಸಕಲ ವ್ಯವಸ್ಥೆ ಕಲ್ಪಿಸಿದರು.

ಸ್ವಂತ ಊರಿಗೆ ತೆರಳಿದ ತಕ್ಷಣ ತಪಾಸಣೆ:
ಸ್ವಸ್ಥಾನಕ್ಕೆ ಮರಳಿದ ತಕ್ಷಣ ಅಲ್ಲಿಯೂ ಅಲ್ಲಿನ ಜಿಲ್ಲಾಡಳಿತ ಊರಿಗೆ ಬಂದವರ ವೈದ್ಯಕೀಯ ತಪಾಸಣೆ ನಡೆಸಲಿದೆ. ಜೊತೆಗೆ ಅವರನ್ನು 14 ದಿನಗಳ ಹೋಂ ಕ್ವಾರಂಟೈನ್‌ನಲ್ಲಿಡಲು ಕ್ರಮ ಕೈಗೊಳ್ಳಲಾಗುವ ಕುರಿತು ಮಾಹಿತಿ ಲಭ್ಯವಾಗಿದೆ.

ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕ ರಾದ ನವೀನ್ ಬೆಂಜನಪದವು, ರಾಮಕಾಟಿಪಳ್ಳ, ದಿವಾಕರ, ಬೂಡಾ ಅಧ್ಯಕ್ಷ ದೇವದಾಸ ಶೆಟ್ಟಿ, ಬಂಟ್ವಾಳ ಬಿಜೆಪಿ ಕ್ಷೇತ್ರ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರಮುಖರಾದ ವಜ್ರನಾಥ ಕಲ್ಲಡ್ಕ, ಪ್ರದೀಪ್ ಅಜ್ಜಿಬೆಟ್ಟು, ಪವನ್ ಕುಮಾರ್ ಶೆಟ್ಟಿ, ಸನತ್ ರೈ, ಪುಷ್ಪರಾಜ ಚೌಟ, ಸುದರ್ಶನ್ ಬಜ, ಸೀತಾರಾಮ ಪೂಜಾರಿ, ಶಾಸಕರ ಆಪ್ತ ಕಾರ್ಯದರ್ಶಿ ದಿನೇಶ್ ಹಾಜರಿದ್ದರು.

- Advertisement -
spot_img

Latest News

error: Content is protected !!