- Advertisement -
- Advertisement -
ಬಂಟ್ವಾಳ : ಸೀಲ್ ಡೌನ್ ನಿಯಂತ್ರಿತ ವಲಯದಿಂದ ವ್ಯಕ್ಯಿಯೋರ್ವರು ಉದ್ದೇಶಪೂರ್ವಕವಾಗಿ ಮನೆಯಿಂದ ಹೊರಗೆ ಹೋಗಿದ್ದಾರೆ ಎಂದು ಅವರ ಮೇಲೆ ಬಂಟ್ವಾಳ ನಗರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಟ್ವಾಳ ಎಸ್. ವಿ.ಎಸ್.ಶಾಲಾ ಓಣಿ ನಿವಾಸಿ ವಿಜಯಾನಂದ ಎಂಬವರ ಮೇಲೆ ಪ್ರಕರಣ ದಾಖಲಾಗಿದೆ.
ಕೋವಿಡ್ 19 ಪ್ರಕರಣದಲ್ಲಿ ಸಾವನ್ನಪ್ಪಿದ ಹಿನ್ನೆಲೆ ಬಂಟ್ವಾಳ ಪೇಟೆಯನ್ನು ಜಿಲ್ಲಾಡಳಿತದ ಅದೇಶದಂತೆ ಸೀಲ್ ಡೌನ್ ಮಾಡಲಾಗಿತ್ತು. ನಿಯಂತ್ರಿತ ಪ್ರದೇಶಕ್ಕೆ ಒಳಪಟ್ಟ ವ್ಯಕ್ತಿಗಳು ಯಾರು ಕೂಡ ಮನೆಯಿಂದ ಹೋಗಬಾರದೆಂದು ಆದೇಶವಿದ್ದರೂ ಉದ್ದೇಶಪೂರ್ವಕವಾಗಿ ವಿಜಯನಂದ ಅವರು ಮನೆಯಿಂದ ಕಾಲ್ನಡಿಗೆಯಲ್ಲಿ ಹೊರಹೋಗಿದ್ದಾರೆ.
ದೇಶದಾದ್ಯಂತ ತುರ್ತು ಘೋಷಿಸಿ ಪ್ರಾಣ ನಿರೋಧಕ ನಿರ್ಭಂಧದ ನಿಯಮವೆಂದು ತಿಳಿದು ಕೂಡಾ ಕೋವಿಡ್ -19 ಕೊರೊನ ಸೋಂಕು ಹರಡುವಿಕೆಯಲ್ಲಿ ಬೇರೆಯವರ ಪ್ರಾಣಕ್ಕೆ ಅಪಾಯವಾಗುವ ರೀತಿಯಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಅವರ ಮೇಲೆ ಪ್ರಕರಣ ದಾಖಲಾಗಿದೆ.
- Advertisement -