Saturday, March 15, 2025
Homeಕರಾವಳಿಸರ್ವೆ: ಶ್ರೀ ಷಣ್ಮುಖ ಯುವಕ ಮಂಡಲದಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ

ಸರ್ವೆ: ಶ್ರೀ ಷಣ್ಮುಖ ಯುವಕ ಮಂಡಲದಿಂದ ಆಶಾ ಕಾರ್ಯಕರ್ತೆಯರಿಗೆ ಗೌರವಾರ್ಪಣೆ

spot_img
- Advertisement -
- Advertisement -

ಸರ್ವೆ: ಕೊರೊನ ಖಾಯಿಲೆಯ ನಿಯಂತ್ರಣಕ್ಕಾಗಿ ಅವಿರತ ದುಡಿಯುತ್ತಿರುವ, ಮನೆ ಮನೆಗೆ ತೆರಳಿ ಸರಕಾರದ ಜಾಗೃತಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುತ್ತಿರುವ, ಅಂಕಿ ಅಂಶ ಸಂಗ್ರಹಣೆಯಲ್ಲಿ ತೊಡಗಿರುವ ಪುತ್ತೂರು ತಾಲೂಕಿನ ಸರ್ವೆ ಮುಂಡೂರು ವ್ಯಾಪ್ತಿಯ 9 ಮಂದಿ ಆಶಾ ಕಾರ್ಯಕರ್ತೆಯರಿಗೆ ಸರ್ವೆ ಶ್ರೀ ಷಣ್ಮುಖ ಯುವಕ ಮಂಡಲದ ವತಿಯಿಂದ ತಲಾ ಒಂದು ಸಾವಿರದಂತೆ 9000 ರೂಗಳ ಸಹಾಯಧನವನ್ನು ಕೃತಜ್ಞತಾಪೂರ್ವಕವಾಗಿ ನೀಡುವ ಮೂಲಕ ಗೌರವಾರ್ಪಣೆ ಸಲ್ಲಿಸಿದ್ದಾರೆ.

ಮುಂಡೂರು ಗ್ರಾಮ ಪಂಚಾಯತ್ ಆವರಣದಲ್ಲಿ ನಡೆದ ಕೋವಿಡ್ 19 ಗ್ರಾಮೀಣ ಕಾರ್ಯಪಡೆಯ ಸಭೆಯಲ್ಲಿ ಯುವಕ ಮಂಡಲದ ಅಧ್ಯಕ್ಷರಾದ ಕಮಲೇಶ್ ಸರ್ವೆದೋಳಗುತ್ತು ಹಾಗೂ ಪ್ರ ಕಾರ್ಯದರ್ಶಿ ಗೌತಮ್ ರಾಜ್ ಕರಂಬಾರು ಆಶಾ ಕಾರ್ಯಕರ್ತೆಯರಿಗೆ ಧನಸಹಾಯ ಹಸ್ತಾಂತರಿಸಿದರು.

ಈ ಸಂಧರ್ಭದಲ್ಲಿ ಮುಂಡೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ವಸಂತ್ ಎಸ್ ಡಿ, ಉಪಾಧ್ಯಕ್ಷರಾದ ಸೌಮ್ಯ ಕಂಬಳಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಿಂಗಪ್ಪಯ್ಯ , ಸಿ ಡಿ ಪಿ ಓ ಶ್ರೀ ಲತಾ, ಆರೋಗ್ಯಾಧಿಕಾರಿ ಡಾ ನಮಿತಾ ನಾಯ್ಕ್, ಕಂದಾಯ ಇಲಾಖೆ ಗ್ರಾಮ ಕಾರಣಿಕರಾದ ತುಳಸಿ, ಗ್ರಾಮ ಪಂಚಾಯತ್ ಸದಸ್ಯರು,ಕೊರೊನ ವಾರಿಯರ್ ಗಳಾದ ಶ್ರೀ ಧನಂಜಯ ಕುಲಾಲ್ ಮುಂಡೂರು , ಶ್ರೀ ಶರೀಫ್ ಎಸ್ ಎಂ ಸರ್ವೆ ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!