Tuesday, September 17, 2024
Homeಕರಾವಳಿಹಿರೇಬಂಡಾಡಿ: ಪಂಚಾಯಿತಿ ವತಿಯಿಂದ 160 ಜನ SC ST ಮನೆಗಳಿಗೆ ಆಹಾರದ ಕಿಟ್

ಹಿರೇಬಂಡಾಡಿ: ಪಂಚಾಯಿತಿ ವತಿಯಿಂದ 160 ಜನ SC ST ಮನೆಗಳಿಗೆ ಆಹಾರದ ಕಿಟ್

spot_img
- Advertisement -
- Advertisement -

ಹಿರೇಬಂಡಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 160 ಜನ SC ST ಮನೆಗಳಿಗೆ ಗ್ರಾಮ ಪಂಚಾಯಿತಿಯ 25 % ಮೀಸಲು ಹಣದಿಂದ ಅಗತ್ಯವಸ್ತುಗಳ ಕಿಟ್ ಅನ್ನು ವಿತರಿಸಲಾಯಿತು.

ಈ ಕಿಟ್ ಗಳನ್ನ ಪುತ್ತೂರಿನ ಶಾಸಕರಾದ ಶ್ರೀ ಸಂಜೀವ ಮಠಂದೂರು ಅವರು ಇಂದು ವಿತರಿಸಿದರು. ಗ್ರಾಮ ಪಂಚಾಯತ್್ ಸದಸ್ಯರುಗಳು ಈ ಕಿಟ್ ಗಳನ್ನು ಫಲಾನುಭವಿಗಳ ಮನೆ ಮನೆಗೆ ತಲುಪಿಸಿದರು.

ಈ ಸಂದರ್ಭದಲ್ಲಿ ತಾಲೂಕಿನ ತಹಶೀಲ್ದಾರರಾದ ದಿನೇಶ್ ಬಾಬು, ಪುತ್ತೂರು ತಾಲೂಕು ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮ್ಮಬ್ಬ ಶೌಕತ್ ಆಲಿ, ತಾಲೂಕು ಪಂಚಾಯತ್ ಸದಸ್ಯ ಮುಕುಂದ ಬಜತ್ತೂರು, ಸಿಎ ಬ್ಯಾಂಕ್ ನಿರ್ದೇಶಕರಾದ ದಯಾನಂದ ಸರೋಲಿ, ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಉಷಾ ಲಕ್ಷ್ಮೀಶ ಮತ್ತು ಗ್ರಾಮ ಪಂಚಾಯತ್ ಸದಸ್ಯರು, ಪಿಡಿಓ ಮತ್ತು ಫಲಾನುಭವಿಗಳು ಹಾಜರಿದ್ದರು.

- Advertisement -
spot_img

Latest News

error: Content is protected !!