Friday, March 29, 2024
Homeಕರಾವಳಿಮುಳುಗುತ್ತಂತೆ ಮಂಗಳೂರು:ನಾಸಾದ ವಿಜ್ಞಾನಿಗಳಿಂದ ಬಂತು ಎಚ್ಚರಿಕೆಯ ಸಂದೇಶ

ಮುಳುಗುತ್ತಂತೆ ಮಂಗಳೂರು:ನಾಸಾದ ವಿಜ್ಞಾನಿಗಳಿಂದ ಬಂತು ಎಚ್ಚರಿಕೆಯ ಸಂದೇಶ

spot_img
- Advertisement -
- Advertisement -

ಮಂಗಳೂರು: ಮಂಗಳೂರು ಮುಳುಗುತ್ತಂತೆ ಇಂತಹದ್ದೊಂದು ಸುದ್ದಿ ಕರಾವಳಿ ಮಂದಿಗೆ ಹೊಸದೇನಲ್ಲ. ಅನೇಕ ಬಾರಿ ಇಂತಹ ಸುದ್ದಿ ಹರಿದಾಡಿದೆ. ಅನೇಕ ಮಾಧ್ಯಮಗಳಲ್ಲಿ ಈ ಬಗ್ಗೆ ಸುದ್ದಿ ಪ್ರಸಾರವಾದಾಗ ಕರಾವಳಿ ಮಂದಿ ಇಂದೆಂತಹ ಕಾಮಿಡಿ ವಿಚಾರ ಅಂತಾ ನಕ್ಕು ಸುಮ್ಮನಾಗಿದ್ದಾರೆ. ಆದ್ರೆ ಇವತ್ತು ನಾವು ಹೇಳಿರುವ ವಿಚಾರ ಖಂಡಿತ ನಗುವಂತಹ ವಿಚಾರವಲ್ಲ. ಕೊಂಚ ಯೋಚನೆ ಮಾಡಲೇ ಬೇಕಾದಂತಹ ವಿಚಾರ. ಯಾಕಂದ್ರೆ ಇವತ್ತು ನಾವು ಹೇಳಿರುವ ವಿಚಾರ ಸ್ವಲ್ಪ ಸೀರಿಯಸ್ ಆಗಿರುವಂತದ್ದೇ. ಯಾಕಂದ್ರೆ ನಾವೂ ಈಗ ಹೇಳುತ್ತಿರುವ ಸುದ್ದಿ ನಾವು ಹೇಳಿದ್ದಲ್ಲ. ಇದು  ನಾಸಾ ವಿಜ್ಞಾನಿಗಳು ತಮ್ಮ ಅಧ್ಯಯನದ ಬಳಿಕ ನೀಡುರುವಂತಹ ವರದಿ.

ಹೌದು..  ಒಂದು ದಶಕದೊಳಗೆ ರಾಜ್ಯದ ಕಡಲ ನಗರಿ ಮಂಗಳೂರು ದೇಶದ ವಾಣಿಜ್ಯ ನಗರಿ ಮುಂಬೈ ಸೇರಿದಂತೆ ಕಡಲತಡಿಯಲ್ಲಿರುವ ಮಹಾನಗರಗಳು ಸಮುದ್ರದ ನೀರಿನಲ್ಲಿ ಮುಳುಗಡೆಯಾಗಲಿದೆ ಎಂಬ ಭಯಾನಕ ವಿಚಾರವನ್ನು ನಾಸಾ ಹೊರಹಾಕಿದೆ. ಅಲ್ಲದೇ ಮಂಗಳೂರಿನ ಪಿಲಿಕುಳ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ, ಸಂಶೋಧಕ, ಪ್ರೊ. ಕೆ.ವಿ ರಾವ್ “ನಾಸಾ ವಿಜ್ಞಾನಿಗಳು ಹೇಳಿರುವ ಮಾಹಿತಿ ಸತ್ಯ ಮತ್ತು ಭವಿಷ್ಯದ ದಿನಗಳಲ್ಲಿ ಸಂಭವಿಸಬಹುದಾದ ಘಟನೆ” ಎಂದು ಅಂತಾ ಹೇಳಿದ್ದಾರೆ.

“ಜಗತ್ತಿನಲ್ಲಿ ಪ್ರತಿನಿತ್ಯವಾಗುತ್ತಿರುವ ನಗರೀಕರಣ, ಕಾರ್ಖಾನೆಗಳ ಸಂಖ್ಯೆ ಹೆಚ್ಚಳವಾಗುತ್ತಿರೋದ್ರಿಂದ ವಾತವರಣದಲ್ಲೂ ಮಾಲಿನ್ಯ ಜಾಸ್ತಿಯಾಗುತ್ತಿದೆ. ಹೀಗೆಯೇ ಮುಂದುವರಿದರೆ ಮಾಲಿನ್ಯ ಅತಿಯಾಗಿ ಪರಿಸ್ಥಿತಿ ಮನುಷ್ಯನ ಕೈತಪ್ಪಿ ಜಗತ್ತಿನ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದೂ ಅಸಾಧ್ಯ” ಅಂತಾ ಕೆ. ವಿ. ರಾವ್ ತಿಳಿಸಿದ್ದಾರೆ.

ಅದೇನೇ ಇರಲಿ..ನಾಸಾ ಎಚ್ಚರಿಕೆಯನ್ನು ನೀಡಿದೆ.ಆದರೆ ಇಂತಹ ಭಯಾನಕ ಸನ್ನಿವೇಶವನ್ನು ತಡೆಯುವಂತಹ ಅಸ್ತ್ರ ಕೂಡ ನಮ್ಮಲ್ಲಿಯೇ ಇದೆ. ನಮ್ಮ ಸ್ವಾರ್ಥಕ್ಕಾಗಿ ನಾವು ಪ್ರಕೃತಿಯನ್ನು ಬೇಕಾಬಿಟ್ಟಿ ಬಳಸಿಕೊಳ್ಳುವ ಬದಲು ಪ್ರಕೃತಿ ಸಂರಕ್ಷಣೆಯ ಕಡೆಗೆ ಗಮನ ನೀಡುವುದು ಅವಶ್ಯಕವಾಗಿದೆ.

- Advertisement -
spot_img

Latest News

error: Content is protected !!