Thursday, June 4, 2026
HomeUncategorizedಉಡುಪಿ: ಶೋಭಾ ಕರಂದ್ಲಾಜೆ ಹೆಸರು ಬದಲಾಯಿಸಿ ಮುಂದಿನ ಚುನಾವಣೆ ಎದುರಿಸುತ್ತಾರೆ ಎಂಬ ವದಂತಿ; ಹೆಸರು ಬದಲಾಯಿಸಲು...

ಉಡುಪಿ: ಶೋಭಾ ಕರಂದ್ಲಾಜೆ ಹೆಸರು ಬದಲಾಯಿಸಿ ಮುಂದಿನ ಚುನಾವಣೆ ಎದುರಿಸುತ್ತಾರೆ ಎಂಬ ವದಂತಿ; ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ ಎಂದು ಕೇಂದ್ರ ಸಚಿವೆ ಪ್ರಶ್ನೆ

- Advertisement -
- Advertisement -

ಉಡುಪಿ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 2023ರ ವಿಧಾನಸಭಾ ಚುನಾವಣೆಯಲ್ಲಿ ಹೆಸರು ಬದಲಾಯಿಸಿ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ ಎಂಬ ಬಗ್ಗೆ ಒಂದಷ್ಟು ಸುದ್ದಿಗಳು ಹರಿದಾಡುತ್ತಿದ್ದವು. ಈ ಬಗ್ಗೆ ಸ್ವತಃ ಅವರೇ ಸ್ಪಷ್ಟನೆ ನೀಡಿದ್ದಾರೆ.

ಇದು ಯಾರೋ ಹಬ್ಬಿಸಿದ ಸುಳ್ಳು ಸುದ್ದಿ. ನನ್ನ ವಿರುದ್ಧ ಯಾರೋ ಷಡ್ಯಂತ್ರ ಮಾಡುತ್ತಿದ್ದಾರೆ. ರಾಜಕಾರಣಿಗಳನ್ನ ಕೆಲವರು ಜೋಕರ್ಸ್ ಅಂದುಕೊಂಡಿದ್ದಾರೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ,


ಮಾಧ್ಯಮ, ಸಾಮಾಜಿಕ, ರಾಜಕೀಯ ವಲಯ ಅಥವಾ ವಿರೋಧ ಪಕ್ಷ ಅಪಪ್ರಚಾರ ನಿಲ್ಲಿಸಬೇಕು. ಈ ರೀತಿ ಮಾಡುವವರಿಗೆ ಇದು ನನ್ನ ವಿನಮ್ರ ವಿನಂತಿ. ಯಾಕೆ ಈ ಚರ್ಚೆ ಶುರುವಾಯಿತು ಗೊತ್ತಿಲ್ಲ. ಹೆಸರು ಬದಲಾಯಿಸಲು ನನಗೆ ತಲೆ ಕೆಟ್ಟಿದ್ಯಾ ಎಂದು ಪ್ರಶ್ನಿಸಿದ್ದಾರೆ.

- Advertisement -

Latest News

error: Content is protected !!