Monday, June 8, 2026
Homeತಾಜಾ ಸುದ್ದಿರೈತರ ಖಾತೆಗೆ ನೇರವಾಗಿ 4 ಸಾವಿರ ರೂ. ನಗದು ಜಮಾವಣೆ: ಸರ್ಕಾರ ಘೋಷಣೆ

ರೈತರ ಖಾತೆಗೆ ನೇರವಾಗಿ 4 ಸಾವಿರ ರೂ. ನಗದು ಜಮಾವಣೆ: ಸರ್ಕಾರ ಘೋಷಣೆ

- Advertisement -
- Advertisement -

ಭೂಪಾಲ್: ರೈತರ ಕಲ್ಯಾಣ ನನ್ನ ಜೀವನದ ಗುರಿಯಾಗಿದ್ದು, ರಾಜ್ಯ ಸರ್ಕಾರದ ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯಡಿ 4 ಸಾವಿರ ರೂ.ಗಳನ್ನು ನೇರ ರೈತರ ಖಾತೆಗೆ ಎರಡು ಕಂತುಗಳಲ್ಲಿ ವರ್ಗಾವಣೆ ಮಾಡುವುದಾಗಿ ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಘೋಷಿಸಿದ್ದಾರೆ.

ಸೆಪ್ಟಂಬರ್ 25 ರಂದು ದೀನ್ ದಯಾಳ್ ಉಪಾಧ್ಯಾಯ್ ಅವರ ಜನ್ಮ ದಿನಾಚರಣೆಯಿದ್ದು, ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ ಯೋಜನೆಯಡಿ ದಾಖಲಿಸಿಕೊಂಡಿರುವ 77 ಲಕ್ಷ ರೈತರಿಗೆ ಮುಖ್ಯಮಂತ್ರಿಗಳ ರೈತ ಕಲ್ಯಾಣ ಯೋಜನೆಯಡಿ ಈ ಸೌಲಭ್ಯ ಸಿಗಲಿದೆ.

ರೈತರ ಒಟ್ಟಾರೆ ಅಭಿವೃದ್ಧಿಗಾಗಿ ಕಿಸಾನ್ ಸಮ್ಮನ್ ನಿಧಿ, ಶೂನ್ಯ ಬಡ್ಡಿ ದರದಲ್ಲಿ ಸಾಲ ಮತ್ತು ಪ್ರಧಾನಿ ಬೆಳೆ ವಿಮೆ ಮುಂತಾದ ಯೋಜನೆಗಳೊಂದಿಗೆ ರೈತರ ಹಿತದೃಷ್ಟಿಯಿಂದ ನಡೆಸಬೇಕೆಂದು ನಾವು ನಿರ್ಧರಿಸಿದ್ದು, ಎಲ್ಲಾ ಯೋಜನೆಗಳನ್ನು ವಿಶೇಷ ಪ್ಯಾಕೇಜ್ ಆಗಿ ಅನುಷ್ಠಾನ ಮಾಡುತ್ತೇವೆ ಎಂದು ಸಿಎಂ ಚೌಹಾಣ್ ಹೇಳಿದ್ದಾರೆ.

ರೈತರಿಗೆ ಶೂನ್ಯದರದಲ್ಲಿ ಸಾಲ ನೀಡುವ ಸಲುವಾಗಿ 800 ಕೋಟಿ ರು ಹಣವನ್ನು ಸಹಕಾರ ಸಂಘಗಳಿಗೆ ನೀಡಿದ್ದಾರೆ.

- Advertisement -

Latest News

error: Content is protected !!