Wednesday, May 15, 2024
Homeತಾಜಾ ಸುದ್ದಿಮದುವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಅರೆಸ್ಟ್ ಮಾಡಿಸಿದ ಪೂನಂ...

ಮದುವೆಯಾದ ಕೆಲವೇ ದಿನಗಳಲ್ಲಿ ಪತಿ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡಿ ಅರೆಸ್ಟ್ ಮಾಡಿಸಿದ ಪೂನಂ ಪಾಂಡೆ

spot_img
- Advertisement -
- Advertisement -

ಗೋವಾ : ಪಡ್ಡೆ ಹುಡುಗರ ಕನಸಸಿನ ರಾಣಿ ಬಾಲಿವುಡ್ ನಟಿ ಪೂನಂ ಪಾಂಡೆ ಕಳೆದ ಕೆಲ ದಿನಗಳ ಹಿಂದೆಯಷ್ಟೇ ಬಹುಕಾಲದ ಗೆಳೆಯ ಸ್ಯಾಮ್​ನನ್ನು ವರಿಸಿದ್ದರು. ಆದರೆ ಈಗ ಗಂಡನ ವಿರುದ್ಧವೇ ದೂರು ನೀಡಿದ್ದಾರೆ.

ಪೂನಂ ಪಾಂಡೆ ತನ್ನ ಪತಿಯ ವಿರುದ್ಧ ದೂರು ದಾಖಲಿಸಿದ್ದಾರೆ. ನನಗೆ ಕಿರುಕುಳ ನೀಡಿ ಬೆದರಿಕೆ ಹಾಕಿ ಹಲ್ಲೆ ಮಾಡಿದ್ದಾನೆ ಎಂದು ಪೂನಂ ಪೊಲೀಸರಿಗೆ ದೂರು ನೀಡಿದ್ದಾರೆ. ಹೀಗಾಗಿ ಪೂನಂ ಪಾಂಡೆ ಗಂಡ ಸ್ಯಾಮ್ ಬಾಂಬೆಯನ್ನು ಪೊಲೀಸರು ಗೋವಾದಲ್ಲಿ ಅರೆಸ್ಟ್ ಮಾಡಿದ್ದಾರೆ.

ಕಳೆದ ಸೆಪ್ಟೆಂಬರ್​ 11ರಂದು ಪೂನಂ ಪಾಂಡೆ ತನ್ನ ಬಹುಕಾಲದ ಗೆಳೆಯ ಸ್ಯಾಮ್ ಬಾಂಬೆಯನ್ನು ವಿವಾಹವಾಗಿದ್ದರು. ಸದ್ಯ ಪೂನಂ ಪಾಂಡೆ ಗೋವಾದ ಕೆನಕೋನಾದಲ್ಲಿ ಚಿತ್ರೀಕರಣದಲ್ಲಿ ತೊಡಗಿದ್ದಾರೆ. ಈ ವೇಳೆ ಸ್ಯಾಮ್ ಅಲ್ಲಿಗೆ ಬಂದು ಪೂನಂ ಮೇಲೆ ಹಲ್ಲೆ ಮಾಡಿ, ಕಿರುಕುಳ ನೀಡಿ ಬೆದರಿಕೆ ಹಾಕಿದ್ದಾರೆ ಎಂದು ಕೆನಕೋನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

- Advertisement -
spot_img

Latest News

error: Content is protected !!