Sunday, April 28, 2024
Homeತಾಜಾ ಸುದ್ದಿಮುಂಬೈ: ಭಿವಾಂಡಿ ಕಟ್ಟಡ ಕುಸಿತ ದುರಂತ; ಸಾವಿನ ಸಂಖ್ಯೆ 37ಕ್ಕೆ ಏರಿಕೆ

ಮುಂಬೈ: ಭಿವಾಂಡಿ ಕಟ್ಟಡ ಕುಸಿತ ದುರಂತ; ಸಾವಿನ ಸಂಖ್ಯೆ 37ಕ್ಕೆ ಏರಿಕೆ

spot_img
- Advertisement -
- Advertisement -

ಮುಂಬೈ: ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಭಿವಾಂಡಿ ಪಟ್ಟಣದಲ್ಲಿ ಕಟ್ಟಡ ಕುಸಿದ ದುರುಂತದಲ್ಲಿ ಬಲಿಯಾದವರ ಸಂಖ್ಯೆ ಬುಧವಾರ 37ಕ್ಕೆ ಏರಿಕೆಯಾಗಿದೆ. ರಕ್ಷಣಾ ತಂಡದಲ್ಲಿ ಎನ್‌ಡಿಆರ್‌ಎಫ್ ಮತ್ತು ಸ್ಥಳೀಯರು ಸೇರಿದ್ದು, ಹಗಲು-ರಾತ್ರಿ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.

ಮೃತಪಟ್ಟ ಒಟ್ಟು 37 ಮಂದಿ ಪೈಕಿ, 2 ರಿಂದ 11 ವರ್ಷದೊಳಗಿನ 15 ಮಕ್ಕಳು ಮತ್ತು 75 ವರ್ಷದ ವೃದ್ಧರೊಬ್ಬರು ಸೇರಿದ್ದಾರೆ. ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಭಿವಾಂಡಿಯ ಇಂದಿರಾ ಗಾಂಧಿ ಮೆಮೊರಿಯಲ್‌ ಆಸ್ಪತ್ರೆಗೆ ದಾಖಲಿಸಲಾಗಿದೆ. ಭಿವಾಂಡಿ ಪಟ್ಟಣದ ಪಟೇಲ್ ಕಾಂಪೌಂಡ್ ಪ್ರದೇಶದಲ್ಲಿ ಕಟ್ಟಡ ಕುಸಿದಿದೆ. ಈ ಕಟ್ಟಡದಲ್ಲಿ ಒಟ್ಟು 21 ಫ್ಲ್ಯಾಟ್ಗಳಿದ್ದ ಜಿಲಾನಿ ಹೆಸರಿನ ಕಟ್ಟಡ ಕುಸಿದು ಅವಘಡ ಸಂಭವಿಸಿತ್ತು.

ಭಿವಾಂಡಿ ನಿಜಾಂಪುರ ನಗರ ಪಾಲಿಕೆ ತಿಳಿಸಿರುವಂತೆ ಸೋಮವಾರ ಮುಂಜಾನೆ 3.40ರ ಸುಮಾರಿಗೆ ಈ ಘಟನೆ ಭಿವಾಂಡಿಯ ನರ್ಪೋಲಿಯ ಪಟೇಲ್‌ ಕೌಂಪೌಂಡ್‌ನಲ್ಲಿ ನಡೆದಿದೆ. ಸುಮಾರು 62ಕ್ಕೂ ಹೆಚ್ಚು ಮಂದಿ ಕುಸಿದು ಬಿದ್ದ ಕಟ್ಟಡದಲ್ಲಿ ಅಪಾಯದಲ್ಲಿ ಸಿಲುಕಿದ್ದರು. ಈ ಪೈಕಿ ಈಗಾಗಲೇ ಹಲವು ಮಂದಿಯನ್ನು ರಕ್ಷಣಾ ಪಡೆಗಳು ಅವಶೇಷಗಳಡಿಯಿಂದ ರಕ್ಷಿಸಿವೆ ಎಂದು ಥಾಣೆ ಪಾಲಿಕೆ ತಿಳಿಸಿದೆ.

ಪ್ರಕರಣದ ತನಿಖೆಗಾಗಿ ಥಾಣೆ ಜಿಲ್ಲೆಯ ಹೆಚ್ಚುವರಿ ಆಯುಕ್ತ ಓಂಪ್ರಕಾಶ್ ದಿವ್ತೆ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ. ಈಗಾಗಲೇ ಇಬ್ಬರು ಸರಕಾರಿ ಅಧಿಕಾರಿಗಳನ್ನು ಈ ವಿಚಾರವಾಗಿ ವಜಾಗೊಳಿಸಲಾಗಿದ್ದು, ಕಟ್ಟಡದ ಮಾಲೀಕನ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ.

- Advertisement -
spot_img

Latest News

error: Content is protected !!