Thursday, June 4, 2026
Homeತಾಜಾ ಸುದ್ದಿಶಿವಮೊಗ್ಗದಲ್ಲಿ ಸ್ಫೋಟ ಸಂಭವಿಸಿದ ಆ ಕ್ಷಣ ಹೇಗಿತ್ತು ಗೊತ್ತಾ?: ಇಲ್ಲಿದೆ ನೋಡಿ ವಿಡಿಯೋ...

ಶಿವಮೊಗ್ಗದಲ್ಲಿ ಸ್ಫೋಟ ಸಂಭವಿಸಿದ ಆ ಕ್ಷಣ ಹೇಗಿತ್ತು ಗೊತ್ತಾ?: ಇಲ್ಲಿದೆ ನೋಡಿ ವಿಡಿಯೋ…

- Advertisement -
- Advertisement -

ಶಿವಮೊಗ್ಗ: ಇಲ್ಲಿನ ಹುಣಸೋಡು ಬಳಿಯಿರುವ ರೈಲ್ವೆ ಕ್ವಾರಿಯಲ್ಲಿ ಸಂಭವಿಸಿದ ಮಹಾ ದುರಂತಕ್ಕೆ 5 ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದಾರೆ. ನಿನ್ನೆ ರಾತ್ರಿ ಸುಮಾರು 10 ರಿಂದ 10.30ರ ಸಮಯದಲ್ಲಿ ಭಾರೀ ಸ್ಫೋಟದ ಶಬ್ದವೊಂದು ಕೇಳಿಸಿತ್ತು. ಶಬ್ದ ಕೇಳಿದ ಜನ ಭೂಕಂಪನ ಆಗ್ತಿರಬೇಕು ಎಂದು ಮನೆಯಿಂದ ಓಡಿ ಹೊರಗೆ ಬಂದಿದ್ದರು. ಸುಮಾರು ಹೊತ್ತು ಭೂಕಂಪನವೇ ಆಗಿರಬೇಕು ಎಂದು ಭಾವಿಸಿದ್ದರು. ಅಲ್ಲದೇ ಅನೇಕ ಮನೆಗಳಲ್ಲಿ ಬಿರುಕು ಕಾಣಿಸಿಕೊಂಡಿತ್ತು. ಇನ್ನು ಕೆಲವು ಕಡೆ ಮನೆಯ ಕಿಟಕಿಯ ಗಾಜುಗಳು ಪುಡಿ ಪುಡಿಯಾಗಿ ಬಿದ್ದಿದ್ದವು. ಕೆಲ ಹೊತ್ತಿನ ಬಳಿಕ ಜನರಿಗೆ ಸತ್ಯ ಗೊತ್ತಾಗಿತ್ತು.

ಇನ್ನು ಆ ಸ್ಫೋಟದ ಕ್ಷಣದ  ಸಿಸಿ ಕ್ಯಾಮೆರಾದ ದೃಶ್ಯವೊಂದು ಮಹಾ ಎಕ್ಸ್ ಪ್ರೆಸ್ ಗೆ ಲಭ್ಯವಾಗಿದೆ. ನಿಜಕ್ಕೂ ಆ ಶಬ್ದ ಕೇಳಿದ್ರೆ ಎಂತಹವರೂ ಕೂಡ ಬೆಚ್ಚಿ ಬೀಳುವಂತಿದೆ. ಇನ್ನು ಈ ಅನಾಹುತದಲ್ಲಿ ಮೃತಪಟ್ಟವರು ಕುಟುಂಬಗಳಿಗೆ ಸಿಎಂ ಬಿ ಎಸ್ ಯಡಿಯೂರಪ್ಪ 5 ಲಕ್ಷ ಪರಿಹಾರ ಘೋಷಣೆ ಮಾಡಿದ್ದಾರೆ. ಅಲ್ಲದೇ ಘಟನೆ ಕುರಿತು ಸಮಗ್ರ ತನಿಖೆಗೆ ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!