Friday, June 5, 2026
Homeಕರಾವಳಿಉಡುಪಿಭಾರಿ ಮಳೆಯಿಂದ ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿ ಸಂಚಾರಿ ಸ್ಥಗಿತ

ಭಾರಿ ಮಳೆಯಿಂದ ಶಿವಮೊಗ್ಗ-ಆಗುಂಬೆ-ಮಂಗಳೂರು ಹೆದ್ದಾರಿ ಸಂಚಾರಿ ಸ್ಥಗಿತ

- Advertisement -
- Advertisement -

ಶಿವಮೊಗ್ಗ: ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆಎಡೆಬಿಡದೆ ಸುರಿಯುತ್ತಿದ್ದು, ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಸದ್ಯ ತೀರ್ಥಹಳ್ಳಿ ತಾಲೂಕಿನಲ್ಲಿ ಕೂಡ ಭಾರಿ ಮಳೆಯಾಗುತ್ತಿದ್ದು, ಈ ಹಿನ್ನೆಲೆ ಶಿವಮೊಗ್ಗ-ಆಗುಂಬೆ-ಮಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗಿದೆ.

ತೀರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿ ಮಾಲತಿ ಮತ್ತು ಸೀತಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದ್ದು, ಅಕ್ಕಪಕ್ಕದ ಜಮೀನುಗಳಿಗೆ ನೀರು ನುಗ್ಗಿದೆ. ಇದರಿಂದ ಹಲವು ಕಡೆ ಪ್ರವಾಹದ ಸ್ಥಿತಿ ನಿರ್ಮಾಣವಾಗಿದ್ದು, ಹೀಗಾಗಿ ಶಿವಮೊಗ್ಗ, ಆಗುಂಬೆ, ಮಂಗಳೂರು ಎನ್ ಹೆಚ್ 169 ರಸ್ತೆಯನ್ನು ಆಗುಂಬೆಯ ಸೋಮೇಶ್ವರದ ಬಳಿ ಬಂದ್ ಮಾಡಲಾಗಿದೆ, ಆದ್ದರಿಂದ ಬೇರೆ ವಾಹನ ಸಂಚಾರ ಮಾರ್ಗ ಬಳಸಬೇಕಾಗಿದೆ.

- Advertisement -

Latest News

error: Content is protected !!