Thursday, June 4, 2026
Homeಕರಾವಳಿಮಂಗಳೂರು: ಕುಟುಂಬ ಸಮೇತರಾಗಿ ಕಟೀಲು ದೇಗುಲಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

ಮಂಗಳೂರು: ಕುಟುಂಬ ಸಮೇತರಾಗಿ ಕಟೀಲು ದೇಗುಲಕ್ಕೆ ಭೇಟಿ ನೀಡಿದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ

- Advertisement -
- Advertisement -

ಮಂಗಳೂರು: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಕುಟುಂಬ ಸಮೇತರಾಗಿ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇಗುಲಕ್ಕೆ ಭೇಟಿ ನೀಡಿದರು.

ಇದೇ ವೇಳೆ ದೇವಸ್ಥಾನದ ವತಿಯಿಂದ ಶಿಲ್ಪಾ ಶೆಟ್ಟಿ ಕುಟುಂಬವನ್ನು ಬರಮಾಡಿಕೊಂಡು ಗೌರವಿಸಲಾಯಿತು. ದೇವರ ಶೇಷ ವಸ್ತ್ರ ಪ್ರಸಾದ ನೀಡಲಾಯಿತು.ಬಳಿಕ ಶಿಲ್ಪಾಶೆಟ್ಟಿ ಯಕ್ಷಗಾನವನ್ನು ವೀಕ್ಷಿಸಿದರು. ಶಿಲ್ಪಾ ಅವರ ಜೊತೆ ಪತಿ ರಾಜ್ ಕುಂದ್ರ, ತಂಗಿ ಶಮಿತಾ ಶೆಟ್ಟಿ, ತಾಯಿ ಸುನಂದಾ ಶೆಟ್ಟಿ, ಮಕ್ಕಳು ಮತ್ತು‌ ಕುಟುಂಬ ವರ್ಗದವರಿದ್ದರು. ದೇವಳದ ಮುಕ್ತೇಸರ ವಾಸುದೇವ ಆಸ್ರಣ್ಣ, ಅನಂತಪದ್ಮನಾಭ ಆಸ್ರಣ್ಣ, ಹರಿನಾರಾಯಣ ದಾಸ ಆಸ್ರಣ್ಣ ಈ ಸಂದರ್ಭ ಉಪಸ್ಥಿತರಿದ್ದರು.

- Advertisement -

Latest News

error: Content is protected !!