Saturday, June 6, 2026
Homeಕರಾವಳಿಧರ್ಮಸ್ಥಳಕ್ಕೆ ಬಂದು ಆರು ವರ್ಷದ ಮಗು ಬಿಟ್ಟು ಪೋಷಕರು ನಾಪತ್ತೆ: ಪೊಲೀಸರಿಂದ ಮಗುವಿನ ರಕ್ಷಣೆ

ಧರ್ಮಸ್ಥಳಕ್ಕೆ ಬಂದು ಆರು ವರ್ಷದ ಮಗು ಬಿಟ್ಟು ಪೋಷಕರು ನಾಪತ್ತೆ: ಪೊಲೀಸರಿಂದ ಮಗುವಿನ ರಕ್ಷಣೆ

- Advertisement -
- Advertisement -

ಧರ್ಮಸ್ಥಳ: ಆರು ವರ್ಷದ ಹೆಣ್ಣು ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾದ ಘಟನೆ ಧರ್ಮಸ್ಥಳದಲ್ಲಿ ನಡೆದಿದೆ. ಧರ್ಮಸ್ಥಳ ಪೊಲೀಸರು ಮಗುವನ್ನು ರಕ್ಷಣೆ ಮಾಡಿದ್ದು, ಪೋಷಕರಿಗಾಗಿ ಹುಡುಕಾಟ ನಡೆಯುತ್ತಿದೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆಂದು ಏ.22 ರಂದು ಬೆಳಗ್ಗೆ ಬಂದಿದ್ದು ಈ ವೇಳೆ ಮಗುವನ್ನು ಬಿಟ್ಟು ಪೋಷಕರು ನಾಪತ್ತೆಯಾಗಿದ್ದಾರೆ. ಮಗು ಆಳುತ್ತಿದ್ದ ಬಗ್ಗೆ ಗಮನಿಸಿದ ಭಕ್ತರು ಧರ್ಮಸ್ಥಳ ಮಾಹಿತಿ ಕಚೇರಿಗೆ ತಲುಪಿಸಿ ವಿಚಾರಿಸಿದಾಗ ಮನೆಯವರು ಮಿಸ್ ಅಗಿರುವ ಬಗ್ಗೆ ಮಾಹಿತಿ ನೀಡಿದ್ದು ಅದರಂತೆ ಧರ್ಮಸ್ಥಳ ಪೊಲೀಸರಿಗೆ ಮಾಹಿತಿ ನೀಡಿದ ಅವರು ಮಗುವನ್ನು ರಕ್ಷಣೆ ಮಾಡಿದ್ದಾರೆ.

ಮಗುವನ್ನು ಹೆತ್ತವರ ಬಗ್ಗೆ ವಿಚಾರಿಸಿದಾಗ ಗದಗ ಜಿಲ್ಲೆಯ ಲಕ್ಷ್ಮೇಶರ ತಾಲೂಕಿನ ಚಿಲ್ಲೂರು ಬಡ್ನಿ ನಿವಾಸಿ ಮಂಜಪ್ಪ ಹಡಪದ ಮತ್ತು ನಿರ್ಮಲಾ ದಂಪತಿಗಳ ನಯನಾ(6ವ) ಎಂದು ಹೇಳುತ್ತಿದ್ದು. ಮಗು ಸುರಕ್ಷಿತವಾಗಿ ಧರ್ಮಸ್ಥಳ ಪೊಲೀಸರ ರಕ್ಷಣೆಯಲ್ಲಿದೆ‌. ಹೆತ್ತವರಿಗಾಗಿ ಹುಡುಕಾಟ ಮುಂದುವರೆದಿದೆ.

- Advertisement -

Latest News

error: Content is protected !!