Thursday, June 4, 2026
Homeಕರಾವಳಿಉಡುಪಿಕುಂದಾಪುರ: ಲವ್ ಜಿಹಾದ್ ಗೆ ಯುವತಿ ಬಲಿ ಪ್ರಕರಣ: ಆರೋಪಿ ಅಜೀಜ್ ನನ್ನು ಬಂಧಿಸಿದ ಪೊಲೀಸರು

ಕುಂದಾಪುರ: ಲವ್ ಜಿಹಾದ್ ಗೆ ಯುವತಿ ಬಲಿ ಪ್ರಕರಣ: ಆರೋಪಿ ಅಜೀಜ್ ನನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಕುಂದಾಪುರ: ಲವ್ ಜಿಹಾದ್ ಗೆ ಯುವತಿ ಬಲಿಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರೋಪಿ ಅಜೀಜ್  ನನ್ನು ಪೊಲೀಸರು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.

ಕುಂದಾಪುರದ ಉಪ್ಪಿನಕುದ್ರು ನಿವಾಸಿ ಶಿಲ್ಪಾ ದೇವಾಡಿಗ ಅಜೀಜ್ ನನ್ನು ಕಳೆದ 5 ವರ್ಷಗಳಿಂದ ಪ್ರೀತಿಸುತ್ತಿದ್ದಳು. ಆತನಲ್ಲಿ ವಿವಾಹವಾಗುವಂತೆ ಕೇಳಿಕೊಂಡಿದ್ದಳು. ಆದರೆ ಆತ ನಿರಾಕರಿಸಿದ ಹಿನ್ನೆಲೆ ಮೇ 23ರಂದು ಆತ್ಮಹತ್ಯೆಗೆ ಶಿಲ್ಪಾ ದೇವಾಡಿಗ ಯತ್ನಿಸಿದ್ದಳು. ಚಿಕಿತ್ಸೆ ಫಲಕಾರಿಯಾಗದೆ ಮೇ 25ರಂದು ಸಾವನ್ನಪ್ಪಿದ್ದಳು. ಶಿಲ್ಪಾ ಮನೆಯವರು ಆಕೆಯ ಸಾವಿಗೆ ಅಜಿಜ್ ಕಾರಣ ಎಂದು ಆಱೋಪಿಸಿದ್ದರು. ಅಲ್ಲದೇ ಮತಾಂತರ ಒತ್ತಾಯ ಮತ್ತು ಲವ್ ಜಿಹಾದ್ ಆರೋಪ ಕೇಳಿಬಂದಿತ್ತು.

ಮದುವೆಯಾಗಿದ್ದರೂ ಶಿಲ್ಪಾ ದೇವಾಡಿಗ ಜೊತೆ ಸಂಬಂಧ ಇಟ್ಟುಕೊಂಡಿದ್ದ ಅಜೀಜ್, ಆಕೆಯ ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿತ್ತು. ಇದೀಗ ಪೊಲೀಸರು ಅಜೀಜ್ ನನ್ನು ಬಂಧಿಸಿದ್ದಾರೆ. ಇನ್ನು ಲವ್ ಜಿಹಾದ್ ಪ್ರಕರಣ ಖಂಡಿಸಿ ಮಂಗಳವಾರ ಕುಂದಾಪುರದಲ್ಲಿ ಬಜರಂಗದಳ ಪ್ರತಿಭಟನೆಗೆ ಕರೆ ನೀಡಿದೆ.

- Advertisement -

Latest News

error: Content is protected !!