Thursday, June 4, 2026
Homeಕರಾವಳಿಉಡುಪಿಉಡುಪಿ: ಕಂಚಿನಡ್ಕ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಅನ್ಯಧರ್ಮೀಯರಿಂದ ಅಡ್ಡಿ ಆರೋಪ

ಉಡುಪಿ: ಕಂಚಿನಡ್ಕ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸಕ್ಕೆ ಅನ್ಯಧರ್ಮೀಯರಿಂದ ಅಡ್ಡಿ ಆರೋಪ

- Advertisement -
- Advertisement -

ಉಡುಪಿ: ಕಂಚಿನಡ್ಕ ಬಬ್ಬುಸ್ವಾಮಿ ಮೂಲ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಅನ್ಯಧರ್ಮೀಯರಿಂದ ಅಡ್ಡಿ ಆರೋಪ ಕೇಳಿ ಬಂದಿದೆ. ಕ್ಷೇತ್ರಕ್ಕೆ ಮೇಲ್ಛಾವಣಿ ಅಳವಡಿಸಲು ಅನ್ಯಧರ್ಮೀಯರು ಅಡ್ಡಿ ಉಂಟು ಮಾಡುತ್ತಿದ್ದಾರೆಂಬ ಆರೋಪ ಕೇಳಿ ಬಂದಿದೆ.

ಸರಕಾರಿ ಸ್ಥಳ ಮತ್ತು ರಸ್ತೆ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ನೆಪವೊಡ್ಡಿ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗಿದೆ. ತುಳುನಾಡಿನ ಕಾರಣಿಕದ ಬಬ್ಬುಸ್ವಾಮಿ ದೈವ ಮಾಯವಾದ  ಸ್ಥಳ ಕಂಚಿನಡ್ಕ ದ ಮಿಂಚಿನ ಬಾವಿಯಾಗಿದೆ. ದಲಿತ ಸಮುದಾಯಕ್ಕೆ ಸೇರಿದ ಆರಾಧನಾ ಕ್ಷೇತ್ರದ ಅಭಿವೃದ್ಧಿಗೆ ಇದೀಗ ತಡೆಯುಂಟು ಮಾಡುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಕ್ಷೇತ್ರಕ್ಕೆ ತಗಡು ಚಪ್ಪರ ಅಳವಡಿಸಿದರೆ ವಾಹನ ಸಂಚಾರಕ್ಕೆ ತೊಡಕಾಗುತ್ತದೆ ಎಂದು ಅನ್ಯಧರ್ಮೀಯರು ಆರೋಪ ಮಾಡುತ್ತಿದ್ದಾರೆ ಎನ್ನಲಾಗಿದೆ. ಇನ್ನು ವಿರೋಧಕ್ಕೆ  ಎಸ್ಡಿಪಿಐ ಸಂಘಟನೆ ಬೆಂಬಲ ನೀಡುತ್ತಿದೆ ಎನ್ನಲಾಗಿದೆ. ಮೇಲ್ಚಾವಣಿ ಅಳವಡಿಸಲು ಹಿಂದೂ ಸಂಘಟನೆಗಳು ಒಂದು ವಾರದ ಗಡುವು ನೀಡಿವೆ. ಒಂದು ವಾರದಲ್ಲಿ ಪಂಚಾಯತ್ ಈ ಪ್ರಕರಣವನ್ನು ಇತ್ಯರ್ಥಗೊಳಿಸದೇ ಇದ್ದರೆ ಹೋರಾಟದ ಎಚ್ಚರಿಕೆ ನೀಡಿವೆ,

- Advertisement -

Latest News

error: Content is protected !!