Friday, July 4, 2025
HomeUncategorizedಪದ್ಮುಂಜ-ಕಣಿಯೂರಿನಲ್ಲಿ ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನದ ದೈವಗಳ ಭಂಡಾರ ಮನೆಯ ಶಿಲಾನ್ಯಾಸ ಮತ್ತು ವಾರ್ಷಿಕ ನೇಮೋತ್ಸವ

ಪದ್ಮುಂಜ-ಕಣಿಯೂರಿನಲ್ಲಿ ಶ್ರೀ ಕಲ್ಕುಡ ಸಪರಿವಾರ ದೈವಸ್ಥಾನದ ದೈವಗಳ ಭಂಡಾರ ಮನೆಯ ಶಿಲಾನ್ಯಾಸ ಮತ್ತು ವಾರ್ಷಿಕ ನೇಮೋತ್ಸವ

spot_img
- Advertisement -
- Advertisement -

ಕಣಿಯೂರು: ಕಲ್ಕುಡ ಸಹ ಪರಿವಾರ ಸೇವಾ ಟ್ರಸ್ಟ್ ಕಲ್ಕುಡಮಾಡ ಪದ್ಮುಂಜ ಕಾಣಿಯೂರು ಇದರ ದೈವಗಳ ಬಂಢಾರ ಮನೆಯ ಶಿಲಾನ್ಯಾಸ ಹಾಗು ರಕ್ತೇಶ್ವರೀ ಕೊಡಮಣಿತ್ತಾಯ ಕಲ್ಕುಡ ದೈವಗಳ ನೇಮೋತ್ಸವವು ಇಂದು 17-02-2022 ಹಾಗು ನಾಳೆ ದಿನಾಂಕ 18-02-2022 ರಂದು ನಡೆಯಲಿದೆ.

17-02-2022 ರಂದು ಪುಣ್ಯಾಹ, ದೇವತಾ ಪ್ರಾರ್ಥನೆ, ಗಣಹೋಮ, ತೋರಣ ಮುಹೂರ್ತ, ಕೋಳಿಗೂಟ, ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು ಇನ್ನೂ ಉಮಾಮಹೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ವಿಶೇಷ ಪೂಜೆಯೊಂದಿಗೆ ದೇವರ ಪ್ರಸಾದ ಸಹಿತ ಊರಿನವರಿಂದ ಹೊರೆಕಾಣಿಕೆ ಸಮರ್ಪಣೆ ನಡೆಯಲಿದೆ. ದೈವಗಳಿಗೆ ವಿಶೇಷ ಪೂಜೆ ಪ್ರಸಾದ ವಿತರಣೆ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ 6.30 ರಿಂದ ಜಿಲ್ಲೆಯ ಪ್ರಸಿದ್ಧ ಕಲಾವಿದರಿಂದ ತಾಳಮದ್ದಳೆ ಕಾರ್ಯಕ್ರಮ ಹಾಗೂ 9 ಗಂಟೆಗೆ ವಿಶೇಷ ಪೂಜೆ ಹಾಗೂ ಪ್ರಸಾದ ವಿತರಣೆ ನಡೆಯಲಿದೆ.

18-02-2022 ರಂದು ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹವಾಚನ, ಪಂಚಗವ್ಯ ಶುದ್ಧೀಕರಣ, ಕಲಶ ಪೂಜೆ, ಕಲಶಾಭಿಷೇಕ, ವಿಶೇಷ ತಂಬಿಲ, ಪರ್ವಗಳು ನಡೆಯಲಿವೆ. ಮಧ್ಯಾಹ್ನ ದೈವಗಳಿಗೆ ಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. 6:00 ಗಂಟೆಗೆ ರಕ್ತೇಶ್ವರಿ ಕಲ್ಕುಡ ಕೊಡಮಣಿತ್ತಾಯ ದೈವಗಳ ಭಂಡಾರ ಇಳಿಸಿ ನೇಮೋತ್ಸವ ಪ್ರಾರಂಭವಾಗಲಿದೆ. 8 ಗಂಟೆಗೆ ಅನ್ನಸಂತರ್ಪಣೆ ಹಾಗೂ ರಕ್ತೇಶ್ವರಿ ನೇಮ, ಕಲ್ಕುಡ ಕೊಡಮಣಿತ್ತಾಯ ನೇಮ, ಕಲ್ಲುರ್ಟಿ ನೇಮ ನಡೆಯಲಿದೆ.

22-02-2020 2ನೇ ಮಂಗಳವಾರ ಸಂಜೆ 4:30 ಕ್ಕೆ ಮಹಮ್ಮಾಯಿ ಭೈರವ ಗುಳಿಗ ದೈವಗಳ ಕ್ಷೇತ್ರ ಡೊಂಪಾಡಿ ಪದ್ಮುಂಜದಲ್ಲಿ ಸಾಮೂಹಿಕ ಮಾರಿ ಪೂಜೆ ನಡೆಯಲಿದೆ. ಹಾಗೂ 23ನೇ ಬುಧವಾರ ಸಂಜೆ 6 ಗಂಟೆಗೆ ಕಲ್ಕುಡ ಮಾಡ ಪದ್ಮುಂಜದಲ್ಲಿ ಕುರಿತಂಬಿಲ ನಡೆಯಲಿದೆ.

- Advertisement -
spot_img

Latest News

error: Content is protected !!