Thursday, June 4, 2026
Homeಕರಾವಳಿಬೆಳ್ತಂಗಡಿ: ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗಿದ್ದ ಸ್ಥಿತಿಯಲ್ಲಿ ಸಾವು

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗಿದ್ದ ಸ್ಥಿತಿಯಲ್ಲಿ ಸಾವು

- Advertisement -
- Advertisement -

ಬೆಳ್ತಂಗಡಿ: ವ್ಯಕ್ತಿಯೊಬ್ಬರು ಬಸ್ ನಿಲ್ದಾಣದಲ್ಲಿ ರಾತ್ರಿ ವೇಳೆ ಮಲಗಿದ್ದ ಸ್ಥಿತಿಯಲ್ಲಿ ಮೃತಪಟ್ಟಿರುವ ಬಗ್ಗೆ ತಿಳಿದು ಬಂದಿದೆ. ಮೃತರನ್ನು ಶೇಸಪ್ಪ ಗೌಡ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಶ್ರೀಮತಿ ಹೇಮಾವತಿ ಎಂಬವರು ಕಡಬ ಠಾಣೆಗೆ ನೀಡಿದ ದೂರಿನಂತೆ  ಪೊಲೀಸರು ಯು.ಡಿ.ಆರ್ ನಂ;05/2022 ಕಲಂ. 174 Crpc   ಯಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ತನ್ನ ತಂದೆ ವಿಪರೀತ ಕುಡಿಯುತ್ತಿದ್ದರು. ಫೆ.12 ರಂದು ಮನೆಯಿಂದ ಹೋದವರು ವಾಪಾಸು ಮನೆಗೆ ಬಾರಲಿಲ್ಲ. ಫೆ.13ರಂದು ರಾತ್ರಿ ಆಲಂಕಾರು ಗ್ರಾಮದ ಬಸ್ಸು ನಿಲ್ದಾಣದಲ್ಲಿ ರಾತ್ರಿ ಹೊತ್ತು ಮಲಗಿದವರು ಮಲಗಿದ್ದ ಸ್ಥಿತಿಯಲ್ಲಿ ಮೃತ ಪಟ್ಟಿರುವುದನ್ನು ಚಿಕ್ಕಪ್ಪನ ಮಗ ತಿಳಿಸಿದ್ದರು ಎಂದು ಹೇಳಿದ್ದಾರೆ

ಹಲವು ವರ್ಷಗಳಿಂದ ವಿಪರೀತ ಮಧ್ಯಪಾನ ಸೇವಿಸುವ ಅಭ್ಯಾಸ ಹೊಂದಿದ್ದು ಸರಿಯಾಗಿ ಆಹಾರ ಸೇವಿಸದೇ ಇರುತ್ತಿದ್ದುದು ಸಾವಿಗೆ ಕಾರಣವಾಗಿರಬಹುದೆಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

- Advertisement -

Latest News

error: Content is protected !!