Wednesday, June 3, 2026
Homeಕರಾವಳಿಮಂಗಳೂರುಸುಳ್ಯ; ಕೆಲವು ದಿನಗಳ ಹಿಂದೆ  ಪೈಚಾರ್ ಬಳಿ  ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವ ವೈದ್ಯ...

ಸುಳ್ಯ; ಕೆಲವು ದಿನಗಳ ಹಿಂದೆ  ಪೈಚಾರ್ ಬಳಿ  ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವ ವೈದ್ಯ ಸಾ*ವು

- Advertisement -
- Advertisement -

ಕಳೆದ ಕೆಲವು ದಿನಗಳ ಹಿಂದೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಕಲ್ಲುಗುಂಡಿ ಸಂಪಾಜೆ ಯುವ ವೈದ್ಯ ಡಾ.ಶಮಂತ್ (25) ಚಿಕಿತ್ಸೆ ಫಲಿಸದೇ ನಿಧನರಾಗಿದ್ದಾರೆ. 

ಕಲ್ಲುಗುಂಡಿಯ ಖ್ಯಾತ ವೈದ್ಯ ಡಾ. ಶ್ಯಾಮ್ ಭಟ್ ಅವರ ಪುತ್ರ ಡಾ.ಶಮಂತ್ ದುಗ್ಗಲಡ್ಕದ ನಮ್ಮ ಕ್ಲಿನಿಕ್ ನಲ್ಲಿ ವೈದ್ಯರಾಗಿ ಕೆಲಸ ಮಾಡುತ್ತಿದ್ದರು. ಪ್ರತಿದಿನ ಮನೆಯಿಂದ ಬೈಕ್ ನಲ್ಲಿ ಕ್ಲಿನಿಕ್ ಗೆ ಹೋಗಿ ಬರುತ್ತಿದ್ದರು.  ಎರಡು ವಾರಗಳ ಹಿಂದೆ ಮನೆಗೆ ವಾಪಸ್ ಬರುವಾಗ ಪೈಚಾರಿನಲ್ಲಿ  ಅಪಘಾತವಾಗಿತ್ತು. ಈ ಅಪಘಾತದಲ್ಲಿ ಶಮಂತ್ ಅವರ ಕಾಲಿಗೆ ಗಂಭೀರವಾಗಿ ಗಾಯಾಗಿತ್ತು. ಹಾಗಾಗಿ ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಗುರುವಾರ ಅವರ ಆರೋಗ್ಯದಲ್ಲಿ ದಿಢೀರ್ ಏರುಪೇರಾಗಿತ್ತು. ಆಸ್ಪತ್ರೆಯ ಲ್ಲಿ ಚಿಕಿತ್ಸೆ ನೀಡಲಾಗಿತ್ತಾದರೂ ಫಲಿಸದೆ ನಿಧನರಾಗಿದ್ದಾರೆಂದು ಎನ್ನಲಾಗಿದೆ.

- Advertisement -

Latest News

error: Content is protected !!