Friday, April 26, 2024
Homeಕ್ರೀಡೆಸಿನಿ ಲೋಕದತ್ತ ವಾಲಿದ್ರಾ ಶಿಖರ್​ ಧವನ್​​..? ಕ್ರಿಕೆಟ್​​ ಗೆ ಶೀಘ್ರವೇ ಗುಡ್‌ಬೈ ಹೇಳ್ತಾರಾ?

ಸಿನಿ ಲೋಕದತ್ತ ವಾಲಿದ್ರಾ ಶಿಖರ್​ ಧವನ್​​..? ಕ್ರಿಕೆಟ್​​ ಗೆ ಶೀಘ್ರವೇ ಗುಡ್‌ಬೈ ಹೇಳ್ತಾರಾ?

spot_img
- Advertisement -
- Advertisement -

ಮುಂಬೈ : ಶಿಖರ್​​ ಧವನ್​ ಆಟವೇ ಚೆಂದ. ಟೀಮ್​ ಇಂಡಿಯಾ ಆರಂಭಿಕನಾಗಿ ಧವನ್​​ ಸಕ್ಸಸ್​ ಕಂಡಿದ್ದಾರೆ. ಪ್ರಸಕ್ತ  ಐಪಿಎಲ್​​​ನಲ್ಲೂ ಗಬ್ಬರ್ ಸಿಂಗ್ ಅಬ್ಬರ ಜೋರಾಗಿದ್ದು, ಆರೆಂಜ್ ಕ್ಯಾಪ್ ರೇಸ್​​ನಲ್ಲಿದ್ದಾರೆ. ಇಂತರ ಸ್ಟಾರ್​ ಓಪನರ್ ಕ್ರಿಕೆಟ್​​​​​ಗೆ ಶೀಘ್ರದಲ್ಲೇ ಗುಡ್​​​​​ಬೈ ಹೇಳ್ತಾರಾ ಅನ್ನೋ ಅನುಮಾನ ಕಾಡ್ತಿದೆ. ಇಂತಹದೊಂದು ಗುಮಾನಿಗೆ ಕಾರಣ ಮೀಸೆರಾಜನ ಸಿನಿಮಾ ಆಸಕ್ತಿ.

ಯೆಸ್​​​, ಆನ್​​ ಫಿಲ್ಡ್ ನಲ್ಲಿ ಹೆಚ್ಚು ಸದ್ದು ಮಾಡ್ತಿದ್ದ ಧವನ್​​ ಬಾಲಿವುಡ್​​​ನಲ್ಲಿ ಘರ್ಜಿಸಲು ರೆಡಿಯಾಗಿದ್ದಾರೆ. ಸದ್ದಿಲ್ಲದೇ ಮುಖಕ್ಕೆ ಬಣ್ಣ ಹಚ್ಚಿದ್ದು, ಬಿಟೌನ್​ಗೆ ದಾಂಗುಡಿ ಇಟ್ಟಿದ್ದಾರೆ. ಇದು ಅಚ್ಚರಿ ಅನ್ನಿಸಿದ್ರೂ ಸತ್ಯ. ಹಿಂದಿ ಚಿತ್ರವೊಂದರಲ್ಲಿ ಧವನ್​​​​ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ ಎನ್ನಲಾಗ್ತಿದೆ. ಇದು ಗಬ್ಬರ್ ಸಿಂಗ್ ಅಭಿಮಾನಿಗಳಿಗೆ ನಿಜಕ್ಕೂ ಡಬಲ್​ ಧಮಾಕ.

ಸದ್ಯ ಮಾಹಿತಿ ಪ್ರಕಾರ ಧವನ್​ ಐಪಿಎಲ್​ ಆರಂಭಕ್ಕೂ ಮುನ್ನವೇ ಒಂದು ಚಿತ್ರದಲ್ಲಿ ನಟಿಸಿದ್ದಾರೆ. ಈಗ ಬಿಗ್ ಬಜೆಟ್​ ಚಿತ್ರದಲ್ಲಿ ನಟಿಸುವುದಾಗಿ ತಿಳಿದು ಬಂದಿದೆ. ಆದರೆ ಅವರು ನಟನೆಯ ಚಿತ್ರದ ಹೆಸರಾಗಲಿ, ಅದರ ಪಾತ್ರವಾಗಲಿ ಯಾವುದು ಅನ್ನೋದರ ಗುಟ್ಟು ಬಿಟ್ಟುಕೊಟ್ಟಿಲ್ಲ. ಇನ್ನು ಈ ಚಿತ್ರ ಇದೇ ವರ್ಷದಲ್ಲಿ ಬಿಡುಗಡೆಯಾಗಲಿದೆಯಂತೆ.

ಇನ್ನು ಧವನ್​ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ. ಬದಲಿಗೆ ಅವರ ಪಾತ್ರವು ಚಿತ್ರದಲ್ಲಿ ಪ್ರಮುಖವಾಗಿದ್ದು, ಮೊದಲಿನಿಂದ ಕೊನೆಯವರೆಗೂ ಅವರು ಇರಲಿದ್ದಾರೆ ಎಂದು ಹೇಳಲಾಗಿದೆ. ಹೀಗಾಗಿ ಧವನ್ ಅಭಿನಯದ ಚಿತ್ರದ ಮೇಲೆ ಈಗಾಗಲೇ ನಿರೀಕ್ಷೆಗಳು ಹೆಚ್ಚಿವೆ.

ಕೆಲ ದಿನಗಳ ಹಿಂದಷ್ಟೇ ಧವನ್​​​​ ಬಾಲಿವುಡ್​​ ಸ್ಟಾರ್ ನಟ ಅಕ್ಷಯ್ ಕುಮಾರ್ ಜೊತೆ ಕಾಣಿಸಿಕೊಂಡಿದ್ರು. ಹೀಗಾಗಿ ಎಲ್ಲರೂ ಅಕ್ಷಯ್ ಕುಮಾರ್ ಜೊತೆ ಧವನ್​​​ ಸಿನಿಮಾ ಮಾಡುತ್ತಿದ್ದು, ರಾಮ್​ ಸೇತು ಚಿತ್ರದ ಮೂಲಕ ಬಾಲಿವುಡ್​​ಗೆ ಎಂಟ್ರಿಕೊಡಲಿದ್ದಾರೆ ಎನ್ನಲಾಗ್ತಿತ್ತು. ಆದ್ರೀಗ ಡೆಲ್ಲಿ ಬ್ಯಾಟರ್​ ಆ ಸಿನಿಮಾದಲ್ಲಿ ನಟಿಸ್ತಿಲ್ಲ. ಬೇರೆಯದ್ದೇ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ……ಒಟ್ಟಿನಲ್ಲಿ ಧವನ್​​ ನಟನೆಯ ಚಿತ್ರದ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಬಿಲ್ಡ್ ಆಗಿದೆ. ಆ ಚಿತ್ರ ಯಾವುದು..? ಯಾವಾಗ ರಿಲೀಸ್ ಅಗಲಿದೆ ಎಂಬುದಕ್ಕೆ ಶೀಘ್ರವೇ ಆನ್ಸರ್ ಸಿಗಲಿದೆ.

- Advertisement -
spot_img

Latest News

error: Content is protected !!