Tuesday, May 7, 2024
Homeತಾಜಾ ಸುದ್ದಿಮುಂಬೈಗೆ ಬಂದ ಉಗಾಂಡ ಪ್ರಜೆಯ ಹೊಟ್ಟೆಯಲ್ಲಿತ್ತು 7 ಕೋಟಿ ಮೌಲ್ಯದ ಡ್ರಗ್ಸ್

ಮುಂಬೈಗೆ ಬಂದ ಉಗಾಂಡ ಪ್ರಜೆಯ ಹೊಟ್ಟೆಯಲ್ಲಿತ್ತು 7 ಕೋಟಿ ಮೌಲ್ಯದ ಡ್ರಗ್ಸ್

spot_img
- Advertisement -
- Advertisement -

ಮುಂಬೈ: ಉಗಾಂಡದಿಂದ ಮುಂಬೈಗೆ ಬಂದಿದ್ದ ಪ್ರಜೆಯೊಬ್ಬನ ಹೊಟ್ಟೆಯಲ್ಲ ಬರೊಬ್ಬರಿ 7 ಕೋಟಿ‌ ಮೌಲ್ಯದ 70 ಕೊಕೇನ್​ ಮಾತ್ರೆಗಳು ಪತ್ತೆಯಾಗಿವೆ. ಆತನನ್ನು ಬಂಧಿಸಲಾಗಿದೆ.

ಬ್ರೆಂಡೆನ್​ ಮೆಗದ್ದೆ ಬಂಧಿತ ಉಗಾಂಡ ಪ್ರಜೆ. ಉಗಾಂಡದಿಂದ ಮುಂಬೈನ ಛತ್ರಪತಿ ಶಿವಾಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಬ್ರೆಂಡೆನ್​ ಮೆಗದ್ದೆಯನ್ನು ಡ್ರಗ್ಸ್​ ಸಾಗಣೆ ನಡೆಸುತ್ತಿರುವ ಮಾಹಿತಿಯ ಆಧಾರದ ಮೇಲೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಈತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ ನಂತರ ವೈದ್ಯಕೀಯ ಪರೀಕ್ಷೆ‌ ನಡೆಸಲಾಗಿದೆ.

X-ರೇ, ಸ್ಯ್ಕಾನಿಂಗ್​, ಸೋನೋಗ್ರಫಿ ನಡೆಸಿದಾಗ ಉಗಾಂಡ ವ್ಯಕ್ತಿಯ ಹೊಟ್ಟೆಯಲ್ಲಿ ಸುಮಾರು 70 ಕೊಕೇನ್ ಮಾತ್ರೆಗಳು ಇರುವುದು ಕಂಡು ಬಂದಿದೆ. ಬಳಿಕ ಅವುಗಳನ್ನು ತೆಗೆದ ಕಂದಾಯ ಗುಪ್ತಚರ ನಿರ್ದೇಶನಾಲಯ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

- Advertisement -
spot_img

Latest News

error: Content is protected !!