Friday, June 5, 2026
Homeಕರಾವಳಿಮಂಗಳೂರು: ಕಂಬಳ ಕೋಣಗಳ ಮೇಲೆ ಮಾಟಮಂತ್ರದ ಕರಿಛಾಯೆ: ದೂಜೆ, ಎರ್ಮುಂಡೆ ಮೂಕವೇದನೆ ಕಂಡು ಮಾಲೀಕ ಕಣ್ಣೀರು

ಮಂಗಳೂರು: ಕಂಬಳ ಕೋಣಗಳ ಮೇಲೆ ಮಾಟಮಂತ್ರದ ಕರಿಛಾಯೆ: ದೂಜೆ, ಎರ್ಮುಂಡೆ ಮೂಕವೇದನೆ ಕಂಡು ಮಾಲೀಕ ಕಣ್ಣೀರು

- Advertisement -
- Advertisement -

ಮಂಗಳೂರು: ತುಳುನಾಡ ಜನಪ್ರಿಯ ಕ್ರೀಡೆ ಕಂಬಳದ ಮೇಲೆ ವಾಮಾಚಾರದ ಕರಿನೆರಳು ಬಿದ್ದಿದೆ. ಬೇರೆಯವರ ಕೋಣಗಳು ಗೆಲ್ಲಬಾರದು ಎಂಬ ಕಾರಣಕ್ಕೆ ಕೆಲವರು ಅನ್ಯರ ಕೋಣಗಳಿಗೆ ಮಾಟಮಂತ್ರ ಮಾಡುತ್ತಿದ್ದಾರೆ.

ಇದಕ್ಕೆ ಸಾಕ್ಷಿಯೆಂಬಂತೆ ಕಂಬಳದಲ್ಲಿ ಪದಕ ಗೆಲ್ಲುತ್ತಿದ್ದ ಮಂಗಳೂರಿನ ಪದವು ಕಾನಡ್ಕ ಡೋಲ್ಫಿ ಡಿಸೋಜಾ ಅವರ ಮಾಲೀಕತ್ವದ ದೂಜೆ ಮತ್ತು ಎರ್ಮುಂಡೆ ಕೋಣಗಳು ಎದ್ದೇಳಲಾಗದ ಸ್ಥಿತಿಯಲ್ಲಿವೆ. ಅಲ್ಲದೇ ಹಟ್ಟಿಯಲ್ಲಿ ವಾಮಾಚಾರದ ಕುರುಹು ಪತ್ತೆಯಾಗಿದೆ. ಕೊಟ್ಟಿಗೆಯಲ್ಲಿ ನೂಲು ಮದ್ದು ಹುಡಿ, ತಗಡು ಮತ್ತಿತರ ಸಾಮಗ್ರಿಗಳು ಪತ್ತೆಯಾಗಿವೆ. ಕೋಣಗಳ ಸ್ಥಿತಿ ಕಂಡು ಮಾಲೀಕರು ಕಣ್ಣೀರಿಡುತ್ತಿದ್ದಾರೆ. ಇಂತಹ ಹೀನ ಕೃತ್ಯಕ್ಕೆ ಮುಂದಾವರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಶಪಿಸುತ್ತಿದ್ದಾರೆ.

- Advertisement -

Latest News

error: Content is protected !!