Thursday, June 4, 2026
Homeತಾಜಾ ಸುದ್ದಿವ್ಯಕ್ತಿಯೊಬ್ಬರ ಹೊಟ್ಟೆಯಿಂದ ವೋಡ್ಕಾ ಬಾಟಲಿ ಹೊರ ತೆಗೆದ ವೈದ್ಯರು

ವ್ಯಕ್ತಿಯೊಬ್ಬರ ಹೊಟ್ಟೆಯಿಂದ ವೋಡ್ಕಾ ಬಾಟಲಿ ಹೊರ ತೆಗೆದ ವೈದ್ಯರು

- Advertisement -
- Advertisement -

ನೇಪಾಳ : ವಿಪರೀತ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ವೈದ್ಯರು ವೋಡ್ಕಾ ಬಾಟಲಿ ಹೊರ ತೆಗೆದ ಘಟನೆ ನೇಪಾಳದ ರೌತಾಹರಿ ಜಿಲ್ಲೆಯಲ್ಲಿ ನಡೆದಿದೆ.

ರೌತಾಹರಿ ಜಿಲ್ಲೆಯ ನುರ್ಸಾದ್‌ ಮನ್ಸೂರಿ ಎಂಬ ವ್ಯಕ್ತಿಯೊಬ್ಬ ಭಾರೀ ಹೊಟ್ಟೆ ನೋವಿನಿಂದ ನರಳಾಡುತ್ತಿದ್ದ.  ಬಳಿಕ ಆತ ಆಸ್ಪತ್ರೆಗೆ ಹೋಗಿದ್ದಾನೆ. ಅಲ್ಲಿ ಆತನಿಗೆ ಸ್ಕ್ಯಾನಿಂಗ್‌ ಮಾಡಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.ಸ್ಕ್ಯಾನಿಂಗ್‌ ಮಾಡಿದಾಗ ವಿಚಿತ್ರ ವಸ್ತುವೊಂದು ಪತ್ತೆಯಾಗಿದ್ದು ಬೆಳಕಿಗೆ ಬಂದಿದೆ. ಬಳಿಕ ಆತನನ್ನು ಶಸ್ತ್ರಚಿಕಿತ್ಸೆ ಒಳಪಡಿಸಿದ್ದಾರೆ. ವೈದ್ಯರು ಆತನ ಹೊಟ್ಟೆಯಿಂದ ವೋಡ್ಕಾ ಬಾಟಲಿಯನ್ನು ಹೊರತೆಗೆದಿದ್ದಾರೆ.

 ಇದನ್ನು ಕಂಡು ವೈದ್ಯಕೀಯ ಸಿಬ್ಬಂದಿ ಬೆಚ್ಚಿ ಬಿದ್ದಿದ್ದಾರೆ. ಪ್ರಾಣಾಪಾಯದಿಂದ ವ್ಯಕ್ತಿ ಪಾರಾಗಿದ್ದು ಇದು ಆತನ ಹೊಟ್ಟೆ ಸೇರಿದ್ದು ಹೇಗೆ ಅನ್ನೋದು ಅಚ್ಚರಿಗೆ ಕಾರಣವಾಗಿದೆ.

- Advertisement -

Latest News

error: Content is protected !!