Monday, June 8, 2026
Homeಅಪರಾಧಅಪ್ರಾಪ್ತ ಬಾಲಕಿಗೆ ಮಲತಂದೆಯಿಂದ ಲೈಂಗಿಕ ಕಿರುಕುಳ: 107 ವರ್ಷ ಸಜೆ ನೀಡಿದ ಕೇರಳ ನ್ಯಾಯಾಲಯ

ಅಪ್ರಾಪ್ತ ಬಾಲಕಿಗೆ ಮಲತಂದೆಯಿಂದ ಲೈಂಗಿಕ ಕಿರುಕುಳ: 107 ವರ್ಷ ಸಜೆ ನೀಡಿದ ಕೇರಳ ನ್ಯಾಯಾಲಯ

- Advertisement -
- Advertisement -

ಕಾಸರಗೋಡು: ಹದಿನಾರು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಮಲತಂದೆಗೆ ಹೊಸದುರ್ಗ ಹೆಚ್ಚುವರಿ ಜಿಲ್ಲಾ ಸೆಶನ್ಸ್‌ ನ್ಯಾಯಾಲಯವು 107 ವರ್ಷ ಸಜೆ ಹಾಗೂ 4,25,000 ರೂ. ದಂಡ ವಿಧಿಸಿ ತೀರ್ಪುನೀಡಿದೆ.

ಆರೋಪಿಯು ಮೂಲತಃ ಇಡುಕ್ಕಿ ನಿವಾಸಿಯಾಗಿದ್ದು, ಪ್ರಸ್ತುತ ಕುಳಿಕುನ್ನಿಲ್‌ನಲ್ಲಿ ವಾಸಿಸುತ್ತಿದ್ದಾನೆ. ಆತನಿಗೆ ವಿವಿಧ ಸೆಕ್ಷನ್‌ಗಳಲ್ಲಿ ನ್ಯಾಯಾಲಯವು ದಂಡ ಮತ್ತು ಶಿಕ್ಷೆ ವಿಧಿಸಿದ್ದು, 376(3), 376(2) (‌ಎನ್), 376 (2) (ಎಫ್), ಐಪಿಸಿ ಆಂಡ್‌‌ ಆರ್‍ಡಬ್ಲ್ಯೂ 5(1), 6-ಆರ್‍/ಡಬ್ಲ್ಯೂ, 5(ಎನ್) ಪ್ರಕಾರದ ಐದು ಸೆಕ್ಷನ್‌ಗಳಲ್ಲಿ ತಲಾ 20 ವರ್ಷ ಸಜೆ, 75,000 ರೂ.ದಂಡ ವಿಧಿಸಲಾಗಿದೆ. ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ ಆರು ತಿಂಗಳ ಹೆಚ್ಚುವರಿ ಸಜೆ ನೀಡಲಾಗುತ್ತದೆ. 

ಆರೋಪಿಗೆ ಪೋಕ್ಸೋ ಕಾನೂನು ಪ್ರಕಾರ ಏಳು ವರ್ಷ ಸೆರೆವಾಸ, 50 ಸಾವಿರ ರೂ. ದಂಡ, ದಂಡ ಪಾವತಿಸಲು ವಿಫಲವಾದಲ್ಲಿ ಮತ್ತೆ ಮೂರು ತಿಂಗಳ ಹೆಚ್ಚುವರಿ ಜೈಲುವಾಸ ವಿಧಿಸಲಾಗಿದೆ. ಶಿಕ್ಷೆಯನ್ನು ಒಟ್ಟಿಗೇ ಅನುಭವಿಸಬಹುದೆಂದು ತಿಳಿಸಲಾಗಿದೆ. 

2012-2018ರವರೆಗೆ ಬಾಲಕಿಗೆ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ್ದ ಎಂದು ದೂರು ದಾಖಲಾಗಿತ್ತು. ಮೇಲ್ಪರಂಬ ಪೊಲೀಸರು ದೂರು ದಾಖಲಿಸಿಕೊಂಡಿದ್ದರು. ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಕೇರಳ ರಾಜ್ಯದಲ್ಲೇ ನೀಡಿದ ಅತಿದೊಡ್ಡ ಶಿಕ್ಷೆ ಇದಾಗಿದೆ.

- Advertisement -

Latest News

error: Content is protected !!