Wednesday, July 2, 2025
Homeಅಪರಾಧಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿದ ಸೀನಿಯರ್‍ಸ್; ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ‍್ಯಾಗಿಂಗ್‌; ಐವರು ವಿದ್ಯಾರ್ಥಿಗಳು ಅರೆಸ್ಟ್

ಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿದ ಸೀನಿಯರ್‍ಸ್; ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ‍್ಯಾಗಿಂಗ್‌; ಐವರು ವಿದ್ಯಾರ್ಥಿಗಳು ಅರೆಸ್ಟ್

spot_img
- Advertisement -
- Advertisement -

ಕೊಟ್ಟಾಯಂ: ಇಲ್ಲಿನ ನರ್ಸಿಂಗ್ ಕಾಲೇಜಿನ ಸೀನಿಯರ್‍ಸ್ ವಿದ್ಯಾರ್ಥಿಗಳುಕಾಲೇಜಿನ ಜೂನಿಯರ್ ವಿದ್ಯಾರ್ಥಿಗಳನ್ನು ವಿವಸ್ತ್ರಗೊಳಿಸಿ ಅವರ ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ‍್ಯಾಗಿಂಗ್‌ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಐವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ.

ಕೊಟ್ಟಾಯಂನ ಸರ್ಕಾರಿ ನರ್ಸಿಂಗ್ ಕಾಲೇಜಿನ ತೃತೀಯ ವರ್ಷದ ವಿದ್ಯಾರ್ಥಿಗಳಾದ ಸ್ಯಾಮ್ಯುಯೆಲ್ ಜಾನ್ಸನ್, ಕೆ.ಪಿ. ರಾಹುಲ್ ರಾಜ್, ಎನ್.ಎಸ್. ಜೀವಾ, ವಿವೇಕ್ ಎನ್.ಪಿ. ಮತ್ತು ಸಿ. ರಿಜಿಲ್ ಜಿತ್ ಬಂಧಿತ ವಿದ್ಯಾರ್ಥಿಗಳೆಂದು ಹೇಳಲಾಗಿದೆ. 

ಮೊದಲ ವರ್ಷದ ವಿದ್ಯಾರ್ಥಿಗಳನ್ನು ತೃತೀಯ ವರ್ಷದ ವಿದ್ಯಾರ್ಥಿಗಳು ವಿವಸ್ತ್ರಗೊಳಿಸಿ, ಅವರ ಖಾಸಗಿ ಅಂಗಕ್ಕೆ ಡಂಬಲ್ಸ್ ನೇತು ಹಾಕಿ ರ‍್ಯಾಗಿಂಗ್ ನಡೆಸುತ್ತಿದ್ದರು. ಅಷ್ಟೇಅಲ್ಲದೆ ಅವರಿಗೆ ಚೂಪಾದ ವಸ್ತುಗಳಿಂದ ಮೈಮೇಲೆ ಗಾಯಗೊಳಿಸುತ್ತಿದ್ದರು, ಅಲ್ಲದೆ ಗಾಯದ ಮೇಲೆ ಕೆಲವೊಂದು ಕ್ರಿಮ್ ಹಚ್ಚುತ್ತಿದ್ದು, ಇದರಿಂದ ವಿದ್ಯಾರ್ಥಿಗಳು ಕಿರುಚಿದಾಗ ಬಾಯಿಗೆ ಕೂಡ ಕ್ರಿಮ್ ಹಾಕಿ ವಿಕೃತಿ ಮೆರೆಯುತ್ತಿದ್ದರು ಎನ್ನಲಾಗಿದೆ.

ಬಂಧಿತ ವಿದ್ಯಾರ್ಥಿಗಳನ್ನು ವಿಚಾರಣೆ ನಡೆಸಿದಾಗ, ಅವರು ಈ ಐವರು ವಿದ್ಯಾರ್ಥಿಗಳು ಜೂನಿಯರ್ಸ್ ಗೆ ಕಳೆದ ಮೂರೂ ತಿಂಗಳಿಂದ ಹಿಂಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.

- Advertisement -
spot_img

Latest News

error: Content is protected !!