Monday, March 17, 2025
Homeತಾಜಾ ಸುದ್ದಿಬಸ್‌ನಿಂದ ಬಿದ್ದು ಪಿಯು ವಿದ್ಯಾರ್ಥಿ ಮೃತ್ಯು

ಬಸ್‌ನಿಂದ ಬಿದ್ದು ಪಿಯು ವಿದ್ಯಾರ್ಥಿ ಮೃತ್ಯು

spot_img
- Advertisement -
- Advertisement -

ಶಿವಮೊಗ್ಗ: ಸಾರಿಗೆ ಬಸ್‌ನಿಂದ ಬಿದ್ದು ವಿದ್ಯಾರ್ಥಿಯೊಬ್ಬ ಸಾವನ್ನಪ್ಪಿದ್ದ ಘಟನೆ ನಗರದ ಮೈಲಾರೇಶ್ವರ ದೇವಾಲಯದ ಬಳಿ ನಡೆದಿದೆ.

ವಿದ್ಯಾರ್ಥಿಯು ಗುರುಪುರದಿಂದ ಸಿಟಿಯಲ್ಲಿನ ಕಾಲೇಜಿಗೆ ಬರುವಾಗ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ.

ಪ್ರಥಮ ಪಿಯು ಕಾಮರ್ಸ್ ವಿದ್ಯಾರ್ಥಿ ಯಶವಂತ್ (17) ಮೃತ ವಿದ್ಯಾರ್ಥಿಯಾಗಿದ್ದು, ಈತ ನಗರ ಸಾರಿಗೆ ಬಸ್‌ನಲ್ಲಿ ಪುಟ್ ಬೋರ್ಡ್ ಮೇಲೆ ನಿಂತು ಪ್ರಯಾಣಿಸುತ್ತಿದ್ದ. ಸಿಟಿ ಬಸ್ ಮೈಲಾರೇಶ್ವರ ದೇವಾಲಯದ ಬಳಿ ಬರುವಾಗ, ಚಾಲಕ ಬ್ರೇಕ್ ಹಾಕಿದ್ದಾನೆ. ಇದಕ್ಕಿದ್ದಂತೆ ಬ್ರೇಕ್ ಬಿದ್ದ ಹಿನ್ನೆಲೆಯಲ್ಲಿ ಪುಟ್ ಬೋರ್ಡ್ನ ಮೇಲಿದ್ದ ವಿದ್ಯಾರ್ಥಿ ಬಸ್‌ನಿಂದ ಕೆಳಕ್ಕೆ ಬಿದ್ದು, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

ಈ ಘಟನೆಯ ಸಂಬಂಧ ಪೂರ್ವ ಸಂಚಾರಿ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

- Advertisement -
spot_img

Latest News

error: Content is protected !!