Saturday, June 6, 2026
Homeಕರಾವಳಿಉಡುಪಿಹಿರಿಯ ಭಾಷಾ ವಿಜ್ಞಾನಿ ಡಾ.ಯು.ಪಿ.ಉಪಾಧ್ಯಾಯ ವಿಧಿವಶ

ಹಿರಿಯ ಭಾಷಾ ವಿಜ್ಞಾನಿ ಡಾ.ಯು.ಪಿ.ಉಪಾಧ್ಯಾಯ ವಿಧಿವಶ

- Advertisement -
- Advertisement -

ಉಡುಪಿ : ಹಿರಿಯ ಭಾಷಾ ವಿಜ್ಞಾನಿ ಡಾ.ಯು.ಪಿ. ಉಪಾಧ್ಯಾಯ ವಿಧಿವಶರಾಗಿದ್ದಾರೆ. ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು, ಇಂದು ನಿಧನರಾಗಿದ್ದಾರೆ. ಭಾಷಾ ವಿಜ್ಞಾನಿಯಾಗಿದ್ದ ಯು.ಪಿ. ಉಪಾಧ್ಯಾಯ ಅವರು ತುಳು ಭಾಷೆಗೆ ಬೃಹತ್ ನಿಘಂಟು ರಚಿಸಿದ್ದರು.

ತುಳು ಭಾಷಾ ಅಧ್ಯಯನಕ್ಕೆ ಉಪಾಧ್ಯಾಯರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಇನ್ನು ಇವರ ಪತ್ನಿ ಸುಶೀಲಾ ಪಿ ಉಪಾಧ್ಯಾಯ ಅವರು ಕೂಡ ಹಲವಾರು ಕೃತಿಗಳನ್ನು ರಚಿಸಿದ್ದಾರೆ. ಅಲ್ಲದೇ ತುಳು ಮೌಖಿಕ ಸಾಹಿತ್ಯದ ದಾಖಲೀಕರಣದಲ್ಲಿ ತೊಡಗಿದ್ದರು. ಸುಶೀಲಾ ಅವರು 2014 ರಲ್ಲಿ ವಿಧಿವಶರಾಗಿದ್ದರು. ಹಲವಾರು ಸಂಶೋಧನಾತ್ಮಕ ಕೃತಿಗಳನ್ನು ಬರೆದಿರುವ ಡಾ.ಯು.ಪಿ, ಉಪಾಧ್ಯಾಯ ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ಹಾಗೇ ತುಳು ಸಾಹಿತ್ಯಕ್ಕೆ ತುಂಬಲಾರದ ನಷ್ಟವಾಗಿದೆ. ಇವರ ನಿಧನಕ್ಕೆ ಸಾಕಷ್ಟು ಗಣ್ಯರು, ಸಾಹಿತ್ಯಾಸಕ್ತರು ಕಂಬನಿ ಮಿಡಿದಿದ್ದಾರೆ.

- Advertisement -

Latest News

error: Content is protected !!