Friday, May 17, 2024
Homeತಾಜಾ ಸುದ್ದಿಸುಳ್ಯದ ನಾರಿಗೆ ಒಲಿದ ಮಿಸೆಸ್ ಕರ್ನಾಟಕ - 2020 ಕಿರೀಟ

ಸುಳ್ಯದ ನಾರಿಗೆ ಒಲಿದ ಮಿಸೆಸ್ ಕರ್ನಾಟಕ – 2020 ಕಿರೀಟ

spot_img
- Advertisement -
- Advertisement -

ಸುಳ್ಯ: ಸುಳ್ಯದ ಸಾಧನೆಯ ಮುಕುಟಕ್ಕೆ ಮತ್ತೊಂದು ಗರಿ ಸೇರಿದೆ. ಸುಳ್ಯದ ಬ್ಯಾಂಕ್ ಉದ್ಯೋಗಿಯಾಗಿರುವ ಬೀರಮಂಗಲ ನಿವಾಸಿ ಸುಪ್ರೀತಾ ಕೆ.ಎಸ್ ಅವರು ಮಿಸೆಸ್ ಕರ್ನಾಟಕ -2020 ಆಗಿ ಆಯ್ಕೆಯಾಗಿದ್ದು, ಸೌಂದರ್ಯ ಸ್ಪರ್ಧೆಯ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.

ಮೈಸೂರಿನ ಆರ್.ಆರ್.ಗ್ರೂಪ್ಸ್ (ರಾಕಿಂಗ್ ರತು ಗ್ರೂಪ್ಸ್) ಪ್ರತಿವರ್ಷ ಈ ಸೌಂದರ್ಯ ಸ್ಪರ್ಧೆ ಏರ್ಪಡಿಸುತ್ತಿದ್ದು, ಈ ವರ್ಷದ ಕಿರೀಟವನ್ನು ಸುಳ್ಯದ ಸುಪ್ರೀತ ಕೆ.ಎಸ್ ಗೆದ್ದುಕೊಂಡಿದ್ದಾರೆ. ಜು.11 ರಂದು ಮೈಸೂರಿನ ಕಂಟ್ರಿ ಇನ್ ಹೋಟೆಲ್ ನ ಸಭಾಂಗಣದಲ್ಲಿ ಸ್ಪರ್ಧೆ ನಡೆದಿದ್ದು, ಗೆದ್ದ ಸುಪ್ರೀತಾರವರಿಗೆ ಆರ್.ಆರ್.ಗ್ರೂಪ್ಸ್‌ನ ಎಂ.ಡಿ ರಾಜೇಶ್ ಸಿದ್ಧಮಲ್ಲಪ್ಪವಂಶ ಕಿರೀಟ ತೊಡಿಸಿ, ಕಪ್ ನೀಡಿ ಗೌರವಿಸಿದರು.

ಮಿಸೆಸ್ ಕರ್ನಾಟಕ ಆಗಿ ಆಯ್ಕೆಯಾಗಿರುವ ಸುಪ್ರೀತಾ ಕೆ.ಎಸ್. ರವರು ಸುಳ್ಯ ಬೀರಮಂಗಲ ನಿವಾಸಿ ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ ಅಜಿತ್ ಬಿ.ಟಿ. ಯವರ ಪತ್ನಿ ಹಾಗೂ ನಿವೃತ್ತ ಶಿಕ್ಷಕಿ ಶ್ರೀಮತಿ ಸೂರ್ಯಕಲಾ ತ್ರಿವಿಕ್ರಮ ರವರ ಸೊಸೆ.

ನಿವೃತ್ತ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿಯಾಗಿರುವ ಪುತ್ತೂರು ನಿವಾಸಿ ಕೆ.ಸುರೇಶ್-ಸವಿತಾ ಸುರೇಶ್ ದಂಪತಿಯ ಪುತ್ರಿಯಾಗಿರುವ ಸುಪ್ರೀತಾ ಉಡುಪಿಯಲ್ಲಿ ಪ್ರೌಢ ಹಾಗೂ ಪಿ.ಯು.ಸಿ. ಶಿಕ್ಷಣ ಪೂರೈಸಿ, ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಬಿ.ಬಿ.ಎಂ ಪದವಿ ಪಡೆದರು. ಬಳಿಕ ವಿಜಯಾ ಬ್ಯಾಂಕ್ ಉದ್ಯೋಗಿಯಾಗಿ ಸೇರ್ಪಡೆಗೊಂಡರು. ಚಿತ್ರಕಲೆ, ಸಂಗೀತ, ಯೋಗ, ಅಕ್ವೇರಿಯಂ, ಕರಕುಶಲತೆ, ಗಾರ್ಡನಿಂಗ್ ಹವ್ಯಾಸ ಹೊಂದಿರುವ ಇವರು 2008 ರಲ್ಲಿ ಬಿ.ಬಿ.ಎಂ. ಪದವಿ ಪರೀಕ್ಷೆಯಲ್ಲಿ ಪುತ್ತೂರು ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದರು. ಏ8 ವರ್ಷದ ಪುತ್ರ ಇಶಾನ್ ತಾಯಿಯಾಗಿರುವ ಸುಪ್ರೀತಾ ಈಗ ಯಕ್ಷಗಾನ ಅಭ್ಯಾಸ ಮಾಡುತ್ತಿದ್ದಾರೆ.

- Advertisement -
spot_img

Latest News

error: Content is protected !!