Thursday, May 2, 2024
Homeತಾಜಾ ಸುದ್ದಿಸಿಲಿಕಾನ್ ಸಿಟಿಯಲ್ಲಿ ಇನ್ನೂ ಬಾಕಿ ಉಳಿದಿದೆ 7 ಸಾವಿರ ಮಂದಿಯ ಮೆಡಿಕಲ್ ರಿಪೋರ್ಟ್

ಸಿಲಿಕಾನ್ ಸಿಟಿಯಲ್ಲಿ ಇನ್ನೂ ಬಾಕಿ ಉಳಿದಿದೆ 7 ಸಾವಿರ ಮಂದಿಯ ಮೆಡಿಕಲ್ ರಿಪೋರ್ಟ್

spot_img
- Advertisement -
- Advertisement -

ಬೆಂಗಳೂರು : ಬೆಂಗಳೂರಿನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ 20 ಸಾವಿರದ ಗಡಿ ದಾಟಿದೆ. ದಿನವೊಂದಕ್ಕೆ ಒಂದೂವರೆ ಸಾವಿರದಿಂದ 2 ಸಾವಿರದಷ್ಟು ಮಂದಿ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳುತ್ತಿದ್ದಾರೆ. ಬೆರಳಣಿಕೆಯಷ್ಟು ಸರ್ಕಾರಿ ಲ್ಯಾಬ್ ಗಳಿದ್ದು ಜನಕ್ಕೆ ಕೋವಿಡ್ ಟೆಸ್ಟ್ ಮಾಡಿಸಿಕೊಳ್ಳೋದೇ ದೊಡ್ಡ ಸಮಸ್ಯೆಯಾಗಿದೆ. ಎಷ್ಟೋ ಮಂದಿ ಕೊರೊನಾ ವರದಿ ಬರೋದಕ್ಕೆ ಮೊದಲೇ ಸಾವನ್ನಪ್ಪಿದ ಉದಾಹರಣೆಗಳೂ ಕೂಡ ಇವೆ.

ಇದಕ್ಕಿಂತಲೂ ಆತಂಕದ ವಿಚಾರ ಅಂದ್ರೆ ಬೆಂಗಳೂರಿನಲ್ಲಿ ಸರ್ಕಾರಿ ಲ್ಯಾಬ್ ಗಳ ಕೊರತೆ, ಹಾಗೇ ಲ್ಯಾಬ್ ಗಳಲ್ಲಿ ಸಿಬ್ಬಂದಿ ಕೊರತೆಯಿಂದಾಗಿ 10 ದಿನಗಳಾದ್ರೂ ಕೆಲವರ ಕೋವಿಡ್ ಟೆಸ್ಟ್ ವರದಿ ಕೈ ಸೇರುತ್ತಿಲ್ಲ. ಬೆಂಗಳೂರಿನಲ್ಲಿ ಇನ್ನು 7 ಸಾವಿರ ಮಂದಿಯ ಗಂಟಲು ದ್ರವದ ಪರೀಕ್ಷಾ ವರದಿ ಬರಬೇಕಿದ್ದು, ಸೋಂಕಿತರ ಸಂಖ್ಯೆ ಮತ್ತಷ್ಟು ಏರಿಕೆಯಾಗಲಿದೆ.

ರಾಜಧಾನಿಯ ದಕ್ಷಿಣ ಹಾಗೂ ಪೂರ್ವ ವಲಯದಲ್ಲಿ ಮಾರಕ ಕೊರೊನಾ ಸೋಂಕು ಸಮುದಾಯಕ್ಕೆ ಹಬ್ಬಿದೆ ಎಂದು ಹೇಳಲಾಗಿದ್ದು, ಈ ಭಾಗದಲ್ಲಿ ರಾಪಿಡ್ ಅಂಟಿಜೆನ್ ಟೆಸ್ಟ್ ಮಾಡಿಸಲಾಗುತ್ತಿದೆ. ದಿನೇ ದಿನೇ ನಾಗರಿಕರ ಗಂಟಲು ದ್ರವ ಸಂಗ್ರಹ ಹೆಚ್ಚುತ್ತಿದೆ. ಆದರೆ, ಅವರ ವರದಿ ನೀಡುವುದು ಎರಡು ಮೂರು ದಿನಗಳ ಕಾಲ ವಿಳಂಬವಾಗುತ್ತಿದೆ. ವೈದ್ಯಕೀಯ ವರದಿ ಸೋಂಕಿತರ ಕೈ ಸೇರುತ್ತಿರುವುದು ವಿಳಂಬವಾಗುತ್ತಿರುವ ಕಾರಣ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ ಎಂದು ಬಿಬಿಎಂಪಿ ಕೂಡ ತನ್ನ ವರದಿಯಲ್ಲಿ ತಿಳಿಸಿದೆ.

ಬೆಂಗಳೂರಿನಲ್ಲಿ ಕೆ.ಸಿ.ಜನರಲ್ ಆಸ್ಪತ್ರೆ, ರಾಜೀವ್ ಗಾಂಧಿ ಆಸ್ಪತ್ರೆ, ಜಯನಗರದ ಆಸ್ಪತ್ರೆಗಳ ಲ್ಯಾಬ್ ಗಳು ಹಾಗೂ ಕೆಲ ಖಾಸಗಿ ಲ್ಯಾಬ್ ಗಳಲ್ಲಿ ಮಾತ್ರ ಕೋವಿಡ್-19 ಟೆಸ್ಟ್ ನಡೆಯುತ್ತಿದೆ. ಆದರೆ, ಸಾವಿರಾರು ಸಂಖ್ಯೆಯಲ್ಲಿ ಪರೀಕ್ಷೆಗೆ ಸ್ಯಾಂಪಲ್ ಗಳು ಬರುತ್ತಿದ್ದರೂ ವರದಿ ನೀಡುವುದು ಮಾತ್ರ ಬಹಳ ವಿಳಂಬವಾಗುತ್ತಿದೆ. ಹೀಗಾಗ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ ಎಂದು ಹೇಳಲಾಗುತ್ತಿದೆ. ಸದಸ್ಯ ಇನ್ನು 7 ಸಾವಿರ ಮಂದಿಯ ಗಂಟಲು ದ್ರವ ಪರೀಕ್ಷೆಯ ಸ್ಯಾಂಪಲ್ ಬರಬೇಕಿದೆ ಎಂದು ಅಂದಾಜಿಸಲಾಗಿದೆ…

- Advertisement -
spot_img

Latest News

error: Content is protected !!