Friday, May 17, 2024
Homeತಾಜಾ ಸುದ್ದಿವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿ : ಐಐಟಿ ಪ್ರವೇಶಕ್ಕೆ ಬದಲಾದ ಮಾನದಂಡ

ವಿದ್ಯಾರ್ಥಿಗಳಿಗೆ ಸಿಹಿ ಸುದ್ಧಿ : ಐಐಟಿ ಪ್ರವೇಶಕ್ಕೆ ಬದಲಾದ ಮಾನದಂಡ

spot_img
- Advertisement -
- Advertisement -

ನವದೆಹಲಿ:ದೇಶದ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆ ಐಐಟಿ ಪ್ರವೇಶಕ್ಕೆ ಮಾನದಂಡಗಳನ್ನು ಸಡಿಲಿಸಲಾಗಿದೆ. 12 ನೇ ತರಗತಿಯಲ್ಲಿ ಕನಿಷ್ಠ ಶೇಕಡ 75 ರಷ್ಟು ಅಂಕ ಗಳಿಸಿರಬೇಕೆಂಬ ನಿಯಮಗಳನ್ನು ಸಡಿಲಿಸಿ , ಸರಳವಾಗಿ ಪಾಸ್ ಆದವರು ಕೂಡ ಪ್ರವೇಶ ಪಡೆಯಬಹುದಾಗಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಕುರಿತು ಮಾಹಿತಿ ನೀಡಿದ್ದಾರೆ


ಪ್ರಸಕ್ತ ಶೈಕ್ಷಣಿಕ ವರ್ಷ ಮಾರಕ ಕೊರೋನಾ ಕಾರಣದಿಂದ ಹಲವಾರು ಬೋರ್ಡ್ ಪರೀಕ್ಷೆಗಳನ್ನು ರದ್ದುಗೊಳಿಸಲಾಗಿದೆ. ಹಾಗಾಗಿ ಭಾರತೀಯ ತಂತ್ರಜ್ಞಾನ ಸಂಸ್ಥೆಗಳು ಈ ವರ್ಷ 12ನೇ ತರಗತಿಯ ಪ್ರವೇಶ ಅರ್ಹತಾ ಮಾನದಂಡಗಳನ್ನು ಸಡಿಲಗೊಳಿಸಲಿವೆ.
ಮಾನವ ಸಂಪನ್ಮೂಲ ಅಭಿವೃದ್ದಿ ಖಾತೆ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಕುರಿತು ಮಾಹಿತಿ ನೀಡಿದ್ದು, ಐಐಟಿಗಳ ಜಂಟಿ ಪ್ರವೇಶ ಮಂಡಳಿ ಈ ಬಗ್ಗೆ ನಿರ್ಧಾರ ಕೈಗೊಂಡಿದೆ ಎಂದು ತಿಳಿಸಿದ್ದಾರೆ. 12ನೇ ತರಗತಿ ಬೋರ್ಡ್ ಪರೀಕ್ಷೆಗಳಲ್ಲಿ ಕನಿಷ್ಠ ಶೇಕಡ 75 ರಷ್ಟು ಅಂಕಗಳನ್ನು ಪರಿಗಣಿಸದೆ , ಪಾಸ್ ಆದವರಿಗೂ ಪ್ರವೇಶ ಪರೀಕ್ಷೆ ಆಧರಿಸಿ ಐಐಟಿಗೆ ಪ್ರವೇಶ ನೀಡಲಾಗುವುದು ಎಂದು ಸಚಿವರು ಟ್ವೀಟ್ ಮೂಲಕ ತಿಳಿಸಿದ್ದಾರೆ

- Advertisement -
spot_img

Latest News

error: Content is protected !!