Friday, June 26, 2026
Homeಕರಾವಳಿಉಡುಪಿಹಿರಿಯ ಪತ್ರಕರ್ತ ಹಾರ್ಯಾಡಿ ಮಂಜುನಾಥ್ ಭಟ್ ನಿಧನ

ಹಿರಿಯ ಪತ್ರಕರ್ತ ಹಾರ್ಯಾಡಿ ಮಂಜುನಾಥ್ ಭಟ್ ನಿಧನ

- Advertisement -
- Advertisement -

ಉಡುಪಿ: ಹಿರಿಯ ಪತ್ರಕರ್ತ ಹಾರ್ಯಾಡಿ ಮಂಜುನಾಥ್ ಭಟ್ (72) ಅವರು ಅಲ್ಪಕಾಲದ ಅನಾರೋಗ್ಯದಿಂದಾಗಿ ಭಾನುವಾರ ಬೆಳಗ್ಗೆ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.

ಮಂಗಳೂರಿನ ನವಭಾರತ ಪತ್ರಿಕೆಯ ಮೂಲಕ 1977 ರಲ್ಲಿ ಪತ್ರಿಕೋದ್ಯಮ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರು. ನಂತರ ಅವರು ಮುಂಗಾರು, ಕನ್ನಡ ಜನ ಅಂತರಂಗ, ಮತ್ತು ಉದಯವಾಣಿ ಪತ್ರಿಕೆಗಳಲ್ಲಿ ವರದಿಗಾರರು, ಉಪ-ಸಂಪಾದಕರಾಗಿ ಸೇವೆ ಸಲ್ಲಿಸಿದರು.

ನಿವೃತ್ತಿಯ ನಂತರ ಮಂಜುನಾಥ್ ಭಟ್ ಅವರು ಬೆಂಗಳೂರಿನಲ್ಲಿ ನೆಲೆಸಿದರು. ಉತ್ಥಾನ ಮಾಸಪತ್ರಿಕೆ ಮತ್ತು ರಾಷ್ಟ್ರೋತ್ಥಾನ ಸಾಹಿತ್ಯ ಸಂಪಾದಕೀಯ ವಿಭಾಗದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರು. ಅವರು ಹಲವಾರು ಇಂಗ್ಲಿಷ್ ಕೃತಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದರು. ಜೊತೆಗೆ ಹಲವರ ಜೀವನಚರಿತ್ರೆಯ ಸಂಪಾದಕರಾಗಿ ಅವರು ಕಾರ್ಯನಿರ್ವಹಿಸಿದ್ದರು. ಮೃತರು ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

- Advertisement -

Latest News

error: Content is protected !!