Saturday, June 6, 2026
Homeಕರಾವಳಿಮಂಗಳೂರುನಿರ್ಗಮಿತ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರು ಅವರಿಗೆ ಬೀಳ್ಕೊಡುಗೆ

ನಿರ್ಗಮಿತ ಬಿಜೆಪಿ ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಕುಂತೂರು ಅವರಿಗೆ ಬೀಳ್ಕೊಡುಗೆ

- Advertisement -
- Advertisement -

ಬೆಂಗಳೂರು: ನಿರ್ಗಮಿತ ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ. ಅವರಿಗೆ ಬೀಳ್ಕೊಡುಗೆ ನಡೆಯಿತು.

ಬೆಂಗಳೂರಿನ ಮಲ್ಲೇಶ್ವರಂನ ಬಿಜೆಪಿ ರಾಜ್ಯ ಕಚೇರಿಯಲ್ಲಿ ನಡೆದ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ, ರಾಜ್ಯಸಭಾ ಸದಸ್ಯ ಲೇಹರ್ ಸಿಂಗ್ ಸಿರೋಯಾ, ಶಾಸಕರಾದ ಮುನಿರತ್ನ, ಸಿ.ಕೆ. ರಾಮಮೂರ್ತಿ ಭಾಗಿಯಾಗಿದ್ದರು.

ಅಲ್ಲದೇ, ಬಿಜೆಪಿಯ ಮಾಜಿ ಶಾಸಕರು, ರಾಜ್ಯ ಪ್ರಧಾನ ಕಾರ್ಯದರ್ಶಿಗಳು, ಬೆಂಗಳೂರಿನ ಜಿಲ್ಲಾಧ್ಯಕ್ಷರು, ಮಾಜಿ ಬಿಬಿಎಂಪಿ ಸದಸ್ಯರು ಕೂಡಾ ಉಪಸ್ಥಿತರಿದ್ದರು.ಬೀಳ್ಕೊಡುಗೆ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯ ಕಚೇರಿಯಲ್ಲಿ ಭೋಜನಕೂಟ ಕೂಡಾ ಆಯೋಜನೆ ಮಾಡಲಾಗಿತ್ತು.

ಕಡಬ ತಾಲೂಕಿನ ಕುಂತೂರಿನವರಾಗಿರುವ ರಾಜೇಶ್ ಜಿ.ವಿ. 2022 ರಿಂದ ಬಿಜೆಪಿ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿದ್ದರು. ಇದೀಗ ರಾಜೇಶ್ ಅವರನ್ನು ಆರ್ ಎಸ್ ಎಸ್ ಸಾಮರಸ್ಯ ಗತಿ ವಿಧಿ ಪ್ರಾಂತ ಸಹ ಸಂಯೋಜಕರಾಗಿ ನಿಯೋಜಿಸಲಾಗಿದೆ.

- Advertisement -

Latest News

error: Content is protected !!