Thursday, June 25, 2026
Homeಇತರಉಚಿತ ಲ್ಯಾಪ್ ಟಾಪ್ ಸಿಗುತ್ತೆ ಅಂದಿದ್ದೇ ತಡ, ವಿದ್ಯಾರ್ಥಿಗಳು ಮಾಡಿದ ಕೆಲಸ ನೋಡಿ...

ಉಚಿತ ಲ್ಯಾಪ್ ಟಾಪ್ ಸಿಗುತ್ತೆ ಅಂದಿದ್ದೇ ತಡ, ವಿದ್ಯಾರ್ಥಿಗಳು ಮಾಡಿದ ಕೆಲಸ ನೋಡಿ…

- Advertisement -
- Advertisement -

ಹಾಸನ : ಹಾಸನ ಸರ್ಕಾರಿ ಕಲಾ ಕಾಲೇಜಿನಲ್ಲಿ ಉಚಿತ ಲ್ಯಾಪ್ ಟಾಪ್ ಗಾಗಿ ವಿದ್ಯಾರ್ಥಿಗಳ ನಡುವೆ ನೂಕು ನುಗ್ಗಲು ನಡೆದಿದ್ದು, ಕಾಲೇಜಿನ ಸ್ಟೀಲ್ ಕಂಬಿ ಮುರಿದು ಕ್ಲಾಸ್ ರೂಮಿನ ಒಳಗೆ ನುಗ್ಗಿದ ಘಟನೆ ನಡೆದಿದೆ.

ಜಿಲ್ಲೆಯಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ವ್ಯಾಪಕವಾಗಿ ಹರಡುತ್ತಿದ್ದರೂ ಕ್ಯಾರೇ ಎನ್ನದ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಉಚಿತ ಲ್ಯಾಪ್ ಟಾಪ್ ವಿತರಣೆ ಮಾಡಲಾಗುತ್ತಿದೆ ಎಂಬ ಸುದ್ದಿ ತಿಳಿಯುತ್ತಿದ್ದಂತೆಯೇ ಗುಂಪು ಗುಂಪಾಗಿ ಕಾಲೇಜಿನ ಬಳಿ ಜಮಾವಣೆಗೊಂಡಿದ್ದಾರೆ.

ಅಲ್ಲದೇ ಲ್ಯಾಪ್ ಟಾಪ್ ಗಾಗಿ ನಾಮುಂದು ತಾಮುಂದು ಎಂದು ಕಾಲೇಜಿನ ಒಳಗೆ ನುಗ್ಗಿದ್ದಾರೆ. ವಿದ್ಯಾರ್ಥಿಗಳ ನೂಕು ನುಗ್ಗಲಿನಲ್ಲಿ ಕಾಲೇಜಿನ ಸ್ಟೀಲ್ ಕಂಬಿಗಳು ಮುರಿದು ಧ್ವಂಸಗೊಂಡಿವೆ.

ವಿದ್ಯಾರ್ಥಿಗಳ ಗಲಾಟೆ, ನೂಕು ನುಗ್ಗಲು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಕೊರೊನಾ ಭೀತಿ ನಡುವೆಯೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡದ ಶಾಲಾ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ. ಈ ವೇಳೆ ಎಚ್ಚೆತ್ತ ಪೊಲೀಸರು ಕಾಲೇಜಿಗೆ ಆಗಮಿಸಿ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ.

- Advertisement -

Latest News

error: Content is protected !!