Thursday, June 4, 2026
Homeತಾಜಾ ಸುದ್ದಿರಾಜ್ಯದಲ್ಲಿ ಇಂದು ದಾಖಲೆಯ ಕೊರೋನಾ ಪ್ರಕರಣಗಳು ಪತ್ತೆ !

ರಾಜ್ಯದಲ್ಲಿ ಇಂದು ದಾಖಲೆಯ ಕೊರೋನಾ ಪ್ರಕರಣಗಳು ಪತ್ತೆ !

- Advertisement -
- Advertisement -

ಬೆಂಗಳೂರು: ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಸೋಂಕು ಪ್ರಕರಣಗಳು ದಾಖಲೆ ಮಟ್ಟಕ್ಕೆ ಸಿಡಿದಿದ್ದು, ಕಳೆದ 24 ಗಂಟೆಯಲ್ಲಿ 9,386 ಸೋಂಕು ಪ್ರಕರಣಗಳು ದೃಢಪಟ್ಟರೆ, 141 ಮಂದಿ ಕೊರೊನಾಗೆ ಬಲಿಯಾಗಿದ್ದಾರೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಗುರುವಾರ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಒಟ್ಟಾರೆ ಸೋಂಕಿತರ ಸಂಖ್ಯೆ 3.09,792ಕ್ಕೆ ಜಿಗಿದರೆ, ಸಾವಿನ ಸಂಖ್ಯೆ 5150ಕ್ಕೆ ಏರಿಕೆಯಾಗಿದೆ.

ರಾಜಧಾನಿ ಬೆಂಗಳೂರಿನಲ್ಲಿ 3357 ಸೋಂಕು ಪ್ರಕರಣಗಳು ವರದಿಯಾದರೆ, 59 ಮಂದಿ ಅಸುನೀಗಿದ್ದಾರೆ. ರಾಜ್ಯದಲ್ಲಿ ಒಂದೇ ದಿನ 7,866 ಡಿಸ್ಚಾರ್ಜ್ ಆಗಿದ್ದಾರೆ.

- Advertisement -

Latest News

error: Content is protected !!