Thursday, June 4, 2026
Homeಕರಾವಳಿಉಡುಪಿಕರಾವಳಿಯಲ್ಲಿ ಗುಪ್ತ ಭಯೋತ್ಪಾದಕ ಚಟುವಟಿಕೆ:  ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಆರೋಪ

ಕರಾವಳಿಯಲ್ಲಿ ಗುಪ್ತ ಭಯೋತ್ಪಾದಕ ಚಟುವಟಿಕೆ:  ಉಡುಪಿಯಲ್ಲಿ ಶಾಸಕ ರಘುಪತಿ ಭಟ್ ಆರೋಪ

- Advertisement -
- Advertisement -

ಉಡುಪಿ: ಕರಾವಳಿಯಲ್ಲಿ ಭಯೋತ್ಪಾದಕ ಚಟುವಟಿಕೆಗಳು ಗುಪ್ತವಾಗಿ ನಡೆಯುತ್ತಿದೆ ಎಂದು ಉಡುಪಿ ಶಾಸಕ ಕೆ. ರಘುಪತಿ ಭಟ್ ಹೇಳಿದ್ದಾರೆ.

ಉಡುಪಿಯಲ್ಲಿ ಇಂದು ಮಾತನಾಡಿದ ರಘುಪತಿ ಭಟ್, ಸಿಎಫ್ ಐ ಮತ್ತು ಎಫ್ ಐ ಸಂಘಟನೆಗಳು ಉಗ್ರರಿಗೆ ಸಹಕಾರ ಕೊಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಉತ್ತರ ಪ್ರದೇಶ ಮತ್ತು ಕೋಲ್ಕತ್ತಾದಿಂದ ಪ್ರವಚನ ಮಾಡಲು ಕೆಲವು ವ್ಯಕ್ತಿಗಳು ಬರುತ್ತಿದ್ದು, ಪ್ರವಚನಕ್ಕೆಂದು ಬಂದವರು ಬೇರೆ ಬೇರೆ ರೀತಿಯ ಚಟುವಟಿಕೆಯಲ್ಲಿ ತೊಡಗಿರುವುದು ಗಮನಕ್ಕೆ ಬಂದಿದೆ ಎಂದು ತಿಳಿಸಿರುವ ರಘುಪತಿ ಭಟ್, ಮಂಗಳೂರಿನಲ್ಲಿ ಎನ್ಐಎಯ ಒಂದು ಘಟಕ ಸ್ಥಾಪನೆ ಆಗಬೇಕು ಎಂದು ಒತ್ತಾಯಿಸಿದ್ದಾರೆ.

ಕರಾವಳಿ ಭಾಗಕ್ಕೆ ಈ ಬೆಳವಣಿಗೆ ಬಹಳ ಆತಂಕಕಾರಿ ಎಂದು ಹೇಳಿರುವ ಶಾಸಕ ಭಟ್, ಬಾಬರ್ ನ ಕಾಲದಿಂದಲೂ ಭಾರತವನ್ನು ಮುಸ್ಲಿಮ್ ರಾಷ್ಟ್ರ ಮಾಡುವ ಹುನ್ನಾರ ನಡೆಯುತ್ತಿದ್ದು, ಭಾರತವನ್ನು ಯಾವ ಕಾರಣಕ್ಕೂ ಇಸ್ಲಾಂ ರಾಷ್ಟ್ರ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.

ಅಲ್ಲದೇ ಚುನಾವಣೆಯ ಸಂದರ್ಭದಲ್ಲಿ ಹಿಂದೂಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ನಡೆದಿತ್ತು ಎಂದು ಇದೇ ವೇಳೆ ರಘುಪತಿ ಭಟ್ ಆರೋಪಿಸಿದ್ದಾರೆ.

- Advertisement -

Latest News

error: Content is protected !!